ಸಾರಾಂಶ
ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಬಿರುಸು ಪಡೆದುಕೊಂಡಿದೆ. ಹಾಲಿ ಅಧ್ಯಕ್ಷ ಜೋ ಬೈಡನ್ , ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಬೆಂಬಲಿಗರನ್ನು ಕಸ ಎಂದು ಟೀಕಿಸಿದ್ದಾರೆ.
ವಾಷಿಂಗ್ಟನ್: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಬಿರುಸು ಪಡೆದುಕೊಂಡಿದೆ. ಹಾಲಿ ಅಧ್ಯಕ್ಷ ಜೋ ಬೈಡನ್ , ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಬೆಂಬಲಿಗರನ್ನು ಕಸ ಎಂದು ಟೀಕಿಸಿದ್ದಾರೆ. ಅವರ ಈ ಹೇಳಿಕೆಗೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.ಕೆಲ ದಿನಗಳ ಹಿಂದಷ್ಟೇ ಟ್ರಂಪ್ ರ್‍ಯಾಲಿಯೊಂದರಲ್ಲಿ ಮಾತನಾಡಿದ್ದ ಅವರ ಬೆಂಬಲಿಗರೊಬ್ಬರು, ‘ಪೋರ್ಟೊರಿಕೋ ಒಂದು ಕಸದ ದ್ವೀಪ’ ಎಂದು ವ್ಯಂಗ್ಯವಾಡಿದ್ದರು. ಈ ಮೂಲಕ ಬೈಡೆನ್ ಅವರನ್ನು ದೂಷಿಸಿದ್ದರು.
ಇದಕ್ಕೆ ಡೆಮಾಕ್ರೆಟ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ತಿರುಗೇಟು ನೀಡಿದ ಅಧ್ಯಕ್ಷ ಬೈಡೆನ್, ‘ಕೆಲ ದಿನಗಳ ಹಿಂದೆ ಭಾಷಣಕಾರರೊಬ್ಬರು ಪೋರ್ಟೊರಿಕೋವನ್ನು ಕಸದ ದ್ವೀಪ ಎಂದು ಟೀಕಿಸಿದ್ದರು. ಆದರೆ ನನಗೆ ಗೊತ್ತಿರುವ, ನಾನು ಆರಿಸಿ ಬಂದಿರುವ, ನನ್ನ ತವರು ರಾಜ್ಯವಾದ ಡೆಲ್ವಾರೆಯ ಪೋರ್ಟೊರಿಕೋ ಅಂಥದ್ದಲ್ಲ. ಅಲ್ಲಿಯ ಜನ ಒಳ್ಳೆಯವರು ಸಂಭಾವಿತರು ಮತ್ತು ಗೌರವಾನ್ವಿತರು. ಅಲ್ಲಿ ನನಗೆ ಕಾಣಿಸುವ ಏಕೈಕ ತೇಲುವ ಕಸವೆಂದರೆ ಅವರ ಬೆಂಬಲಿಗರು ಎಂದು ಹೆಸರು ಹೇಳದೆಯೇ ಟ್ರಂಪ್ ಮತ್ತು ಅವರ ಬೆಂಬಲಿಗರ ವಿರುದ್ಧ ವ್ಯಂಗ್ಯವಾಡಿದ್ದಾರೆ.ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ಸ್ಪರ್ಧಿಸಿರುವ ಅಧ್ಯಕ್ಷೀಯ ಚುನಾವಣೆ ನ.5ರಂದು ನಡೆಯಲಿದೆ.