ಸಾರಾಂಶ
ಇರಾನ್ ಬೆಂಬಲಿತ ಉಗ್ರರು ಜೋರ್ಡಾನ್ ಮೇಲೆ ಭಾನುವಾರ ಡ್ರೋನ್ ದಾಳಿ ನಡೆಸಿದ್ದು, ಈ ವೇಳೆ ಅಲ್ಲಿದ್ದ ಮೂವರು ಅಮೆರಿಕ ಯೋಧರು ಸಾವನ್ನಪ್ಪಿದ್ದಾರೆ ಹಾಗೂ ಹಲವು ಯೋಧರು ಗಾಯಗೊಂಡಿದ್ದಾರೆ.
ಕೊಲಂಬಿಯಾ: ಇರಾನ್ ಬೆಂಬಲಿತ ಉಗ್ರರು ಜೋರ್ಡಾನ್ ಮೇಲೆ ಭಾನುವಾರ ಡ್ರೋನ್ ದಾಳಿ ನಡೆಸಿದ್ದು, ಈ ವೇಳೆ ಅಲ್ಲಿದ್ದ ಮೂವರು ಅಮೆರಿಕ ಯೋಧರು ಸಾವನ್ನಪ್ಪಿದ್ದಾರೆ ಹಾಗೂ ಹಲವು ಯೋಧರು ಗಾಯಗೊಂಡಿದ್ದಾರೆ.
ಇತ್ತೀಚೆಗೆ ಇಸ್ರೇಲ್-ಹಮಾಸ್ ಯುದ್ಧ ಆರಂಭವಾದ ನಂತರದ ಮೊದಲ ಇಂಥ ಘಟನೆ ಇದಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ‘ಈ ಕೃತ್ಯಕ್ಕೆ ಯಾರು ಕಾರಣರೋ ಅವರನ್ನು ಸೂಕ್ತ ಸಮಯದಲ್ಲಿ ಹುಡುಕಿ ಪ್ರತೀಕಾರ ಕೈಗೊಳ್ಳಲಾಗುವುದು’ ಎಂದಿದ್ದಾರೆ.
ಇತ್ತೀಚೆಗೆ ಇರಾನ್ ಬೆಂಬಲಿತ ಹೌತಿ ಉಗ್ರರು ಅಮೆರಿಕ ಹಡಗುಗಳ ಮೇಲೆ ಕೆಂಪು ಸಮುದ್ರದಲ್ಲಿ ದಾಳಿ ಮಾಡಿದ್ದರು.