ಸಾರಾಂಶ
ಪ್ರಧಾನಿ ಹುದ್ದೆ ಹಂಚಿಕೊಳ್ಳುವ ಪಿಎಮ್‌ಎಲ್ ನಾಯಕ ನವಾಜ್ ಷರೀಫ್ ಅವರ ಆಫರ್ ಅನ್ನು ನಾನು ತಿರಸ್ಕರಿಸಿದ್ದೇನೆ.
ಕರಾಚಿ: ಪ್ರಧಾನಿ ಹುದ್ದೆ ಹಂಚಿಕೊಳ್ಳುವ ಪಿಎಮ್‌ಎಲ್ ನಾಯಕ ನವಾಜ್ ಷರೀಫ್ ಅವರ ಆಫರ್ ಅನ್ನು ನಾನು ತಿರಸ್ಕರಿಸಿದ್ದೇನೆ. ಏಕೆಂದರೆ ನನಗೆ ಜನಾದೇಶ ಸಿಕ್ಕಿಲ್ಲ ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಬಿಲಾವಲ್ ಭುಟ್ಟೋ ಹೇಳಿದ್ದಾರೆ.
ಹೀಗಾಗಿ ಸರ್ಕಾರ ರಚನೆ ಬಿಕ್ಕಟ್ಟು ಮುಂದುವರೆದಿದೆ. ನಾನು ಈ ರೀತಿ ಪ್ರಧಾನಿಯಾಗಲು ಬಯಸುವುದಿಲ್ಲ. ನಾನು ಪ್ರಧಾನಿಯಾದರೆ, ಅದು ಪಾಕಿಸ್ತಾನದ ಜನರು ನನ್ನನ್ನು ಆಯ್ಕೆ ಮಾಡಿದ ನಂತರ.
ದೇಶಕ್ಕೆ ಜನರ ಸಮಸ್ಯೆಗಳ ಬಗ್ಗೆ ಮಾತನಾಡುವ ರಾಜಕೀಯ ಪಕ್ಷದ ಅಗತ್ಯವಿದೆ. ರಾಜಕಾರಣಿಗಳು ಮತ್ತು ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ವೈಯಕ್ತಿಕ ಲಾಭದ ಮೇಲೆ ಕೇಂದ್ರೀಕರಿಸುವ ಬದಲು ಈ ದೇಶದ ಜನರ ಬಗ್ಗೆ ಯೋಚಿಸಬೇಕು’ ಎಂದಿದ್ದಾರೆ.