ರಾಜಾಶ್ರಯಕ್ಕೆ ಅಚ್ಚುಮಚ್ಚಿನ ತಾಣ ಬ್ರಿಟನ್‌ : ಇಲ್ಲಿ ದೇಶಭ್ರಷ್ಟರು, ಪದಚ್ಯುತಿಗೊಂಡ ರಾಜಕಾರಣಿಗಳು, ಇತರ ಗಣ್ಯರಿಗೆ ರಾಜಾಶ್ರಯ

| Published : Aug 06 2024, 12:32 AM IST / Updated: Aug 06 2024, 05:03 AM IST

ರಾಜಾಶ್ರಯಕ್ಕೆ ಅಚ್ಚುಮಚ್ಚಿನ ತಾಣ ಬ್ರಿಟನ್‌ : ಇಲ್ಲಿ ದೇಶಭ್ರಷ್ಟರು, ಪದಚ್ಯುತಿಗೊಂಡ ರಾಜಕಾರಣಿಗಳು, ಇತರ ಗಣ್ಯರಿಗೆ ರಾಜಾಶ್ರಯ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಾಶ್ರಯ ಎಂದರೆ ಥಟ್ಟನೆ ನೆನಪಾಗುವುದು ಬ್ರಿಟನ್‌. ಇಲ್ಲಿ ದೇಶಭ್ರಷ್ಟರು, ಒಂದು ದೇಶದಲ್ಲಿ ಪದಚ್ಯುತಿಗೊಂಡ ರಾಜಕಾರಣಿಗಳು, ಇತರ ಗಣ್ಯರು ರಾಜಾಶ್ರಯ ಪಡೆವುದು ಮಾಮೂಲಿ.

ಲಂಡನ್: ರಾಜಾಶ್ರಯ ಎಂದರೆ ಥಟ್ಟನೆ ನೆನಪಾಗುವುದು ಬ್ರಿಟನ್‌. ಇಲ್ಲಿ ದೇಶಭ್ರಷ್ಟರು, ಒಂದು ದೇಶದಲ್ಲಿ ಪದಚ್ಯುತಿಗೊಂಡ ರಾಜಕಾರಣಿಗಳು, ಇತರ ಗಣ್ಯರು ರಾಜಾಶ್ರಯ ಪಡೆವುದು ಮಾಮೂಲಿ. 

ಈಗ ಬಾಂಗ್ಲಾದೇಶದ ನಿರ್ಗಮಿತ ಪ್ರಧಾನಿ ಶೇಖ್‌ ಹಸೀನಾ ಕೂಡ ಬ್ರಿಟನ್‌ನಲ್ಲಿ ರಾಜಾಶ್ರಯ ಬಯಸಿದ್ದಾರೆ.ತಮ್ಮ ತಾಯ್ನಾಡಿನಲ್ಲಿ ಶೋಷಣೆಯ ಭೀತಿಯಿಂದ ಭಯಪಡುವ ಜನರನ್ನು ರಕ್ಷಿಸಲು ನೀಡುವುದೇ ರಾಜಾಶ್ರಯವಾಗಿದೆ. ಹೀಗೆ ಆಶ್ರಯ ಪಡೆದವರನ್ನು ತಾಯ್ನಾಡಿಗೆ ಗಡೀಪಾರು ಮಾಡುವುದು ಸುಲಭವಲ್ಲ. ಇಂಥ ಕಠಿಣ ನಿಯಮ ಬ್ರಿಟನ್‌ನಲ್ಲಿದೆ. ಹೀಗಾಗೇ ಬಹುತೇಕರು ಬ್ರಿಟನ್‌ ಮೊರೆ ಹೋಗುತ್ತಾರೆ.

ಈಗಾಗಲೇ ಭಾರತದ ಉದ್ಯಮಿ ವಿಜಯ ಮಲ್ಯ, ನೀರವ್‌ ಮೋದಿ ಬ್ರಿಟನ್‌ನಲ್ಲಿದ್ದಾರೆ. ಪಾಕ್‌ ಮಾಜಿ ಪ್ರಧಾನಿ ನವಾಜ್‌

ಷರೀಫ್‌, ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್‌ ಅಸಾಂಜ್‌ ಕೂಡ ಬ್ರಿಟನ್‌ನಲ್ಲೇ ಇದ್ದರು.

ಬ್ರಿಟನ್‌ ಸರ್ಕಾರವು ಕಳೆದ ವರ್ಷ ಆಶ್ರಯಕ್ಕಾಗಿ 1.12 ಲಕ್ಷ ಜನರ ಅರ್ಜಿ ವಿಲೇವಾರಿ ಮಾಡಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.