ಅಮೆರಿಕದ ಅಧ್ಯಕ್ಷೀಯ ಹುದ್ದೆ ಚುನಾವಣೆಗೆ ರಿಪಬ್ಲಿಕನ್‌ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಡೊನಾಲ್ಡ್‌ ಟ್ರಂಪ್‌

| Published : Jul 17 2024, 12:46 AM IST / Updated: Jul 17 2024, 08:14 AM IST

ಅಮೆರಿಕದ ಅಧ್ಯಕ್ಷೀಯ ಹುದ್ದೆ ಚುನಾವಣೆಗೆ ರಿಪಬ್ಲಿಕನ್‌ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಡೊನಾಲ್ಡ್‌ ಟ್ರಂಪ್‌
Share this Article
  • FB
  • TW
  • Linkdin
  • Email

ಸಾರಾಂಶ

ಮುಂಬರುವ ಅಮೆರಿಕದ ಅಧ್ಯಕ್ಷೀಯ ಹುದ್ದೆ ಚುನಾವಣೆಗೆ ರಿಪಬ್ಲಿಕನ್‌ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಡೊನಾಲ್ಡ್‌ ಟ್ರಂಪ್‌ ಅವರನ್ನು ಸೋಮವಾರ ಇಲ್ಲಿ ಆಯ್ಕೆ ಮಾಡಲಾಯಿತು. 4 ವರ್ಷಗಳಿಗೊಮ್ಮೆ ನಡೆಯುವ ಪಕ್ಷದ ಸಭೆಯಲ್ಲಿ ಭಾರೀ ಬೆಂಬಲದೊಂದಿಗೆ ಟ್ರಂಪ್‌ ಹೆಸರನ್ನುಘೋಷಿಸಲಾಯಿತು.

ಮಿಲ್ವಾಕಿ: ಮುಂಬರುವ ಅಮೆರಿಕದ ಅಧ್ಯಕ್ಷೀಯ ಹುದ್ದೆ ಚುನಾವಣೆಗೆ ರಿಪಬ್ಲಿಕನ್‌ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಡೊನಾಲ್ಡ್‌ ಟ್ರಂಪ್‌ ಅವರನ್ನು ಸೋಮವಾರ ಇಲ್ಲಿ ಆಯ್ಕೆ ಮಾಡಲಾಯಿತು. 4 ವರ್ಷಗಳಿಗೊಮ್ಮೆ ನಡೆಯುವ ಪಕ್ಷದ ಸಭೆಯಲ್ಲಿ ಭಾರೀ ಬೆಂಬಲದೊಂದಿಗೆ ಟ್ರಂಪ್‌ ಹೆಸರನ್ನುಘೋಷಿಸಲಾಯಿತು. ಟ್ರಂಪ್‌ ಹೀಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿರುವುದು ಇದು 3ನೇ ಬಾರಿ.

2017ರಲ್ಲಿ ಟ್ರಂಪ್ ಹಿಲರಿ ಕ್ಲಿಂಟನ್‌ ವಿರುದ್ಧ ಗೆದ್ದಿದ್ದರೆ, 2021ರಲ್ಲಿ ಜೋ ಬೈಡೆನ್‌ ವಿರುದ್ಧ ಸೋತಿದ್ದರು. ಇದೀಗ ಮತ್ತೆ ಅವರು ಕಣಕ್ಕೆ ಇಳಿಯುತ್ತಿದ್ದು, ಬಹುತೇಕ ಡೆಮಾಕ್ರೆಟ್‌ ಪಕ್ಷದ ನಾಯಕ, ಹಾಲಿ ಅಧ್ಯಕ್ಷ ಜೋ ಬೈಡೆನ್‌ ಅವರನ್ನು ಎದುರಿಸುವ ಸಾಧ್ಯತೆ ಇದೆ.

ಟ್ರಂಪ್‌ ಹೆಸರನ್ನು ಘೋಷಣೆ ಮಾಡಿದ ಪಕ್ಷದ ಅಧ್ಯಕ್ಷ ಮೈಕೆಲ್‌ ವಾಟ್ಲೆ, ‘ನಾವು ಒಂದು ಪಕ್ಷವಾಗಿ ಒಗ್ಗೂಡಬೇಕಿದೆ ಮತ್ತು ಒಂದು ದೇಶವಾಗಿ ನಾವು ಒಗ್ಗೂಡಬೇಕಿದೆ. ಟ್ರಂಪ್‌ ಅವರಂತೆಯೇ ನಾವು ಶಕ್ತಿ ಮತ್ತು ಪುಟಿದೇಳುವ ಶಕ್ತಿಯನ್ನು ತೋರಿಸುವ ಮೂಲಕ ದೇಶವನ್ನು ಅದ್ಭುತ ಭವಿಷ್ಯದತ್ತ ಕೊಂಡೊಯ್ಯಲು ಸಹಕರಿಸಬೇಕು ಎಂದು ಕರೆ ಕೊಟ್ಟರು.