ಸಾರಾಂಶ
ಚೀನಾ ತನ್ನ ರಕ್ಷಣಾ ವೆಚ್ಚವನ್ನು ಶೇ.7.2ರಷ್ಟು ಹೆಚ್ಚಿಸುವ ಮೂಲಕ 19.72 ಲಕ್ಷ ಕೋಟಿ ರು.ಗಳನ್ನು ಮೀಸಲಿಟ್ಟು ಜಗತ್ತಿನಲ್ಲಿ ಎರಡನೇ ಸ್ಥಾನ ಪಡೆದಿದೆ.
ಬೀಜಿಂಗ್: ನೆರೆಹೊರೆ ದೇಶಗಳ ಜೊತೆ ಕಿರಿಕ್ ಜೊತೆಗೆ ತೈವಾನ್ ರಾಷ್ಟ್ರವನ್ನು ತನ್ನ ಕಬಂಧಬಾಹುವಿನೊಳಗೆ ಸೇರಿಸಿಕೊಳ್ಳಲು ಹವಣಿಸುತ್ತಿರುವ ಚೀನಾ ತನ್ನ ರಕ್ಷಣಾ ಬಜೆಟ್‌ನಲ್ಲಿ ಭಾರೀ ಏರಿಕೆ ಮಾಡಿದೆ.
2024-25ನೇ ಸಾಲಿನಲ್ಲಿ ಚೀನಾ ರಕ್ಷಣಾ ವಲಯಕ್ಕೆ 19.72 ಲಕ್ಷ ಕೋಟಿ ರು. ಬಜೆಟ್ ನಿಗದಿ ಮಾಡಿದೆ.ಇದು ಹಿಂದಿನ ವರ್ಷಕ್ಕಿಂತ ಶೇ.7.2ರಷ್ಟು ಹೆಚ್ಚು.
ಹಾಲಿ ಅಮೆರಿಕ ವಾರ್ಷಿಕ 75 ಲಕ್ಷ ಕೋಟಿ ರು. ರಕ್ಷಣಾ ಬಜೆಟ್‌ನೊಂದಿಗೆ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ.ಎರಡನೇ ಸ್ಥಾನದಲ್ಲಿ ಚೀನಾ ಮುಂದುವರೆದಿದೆ.
ಇನ್ನು ಚೀನಾದ ನೆರೆಯ ದೇಶವಾದ ಭಾರತ ಈ ವರ್ಷ ರಕ್ಷಣಾ ವಲಯಕ್ಕೆ 6.21 ಲಕ್ಷ ಕೋಟಿ ರು.ಗಳನ್ನು ಮೀಸಲಿಟ್ಟಿದೆ.