ಲೈವ್‌ನಲ್ಲಿ ವಾಂತಿ ನಿಗ್ರಹಿಸಿ ಕುಳಿತ ಸಿಎನ್‌ಎನ್‌ ಆ್ಯಂಕರ್‌

| Published : Feb 11 2024, 01:51 AM IST / Updated: Feb 11 2024, 11:16 AM IST

wulf blitzer
ಲೈವ್‌ನಲ್ಲಿ ವಾಂತಿ ನಿಗ್ರಹಿಸಿ ಕುಳಿತ ಸಿಎನ್‌ಎನ್‌ ಆ್ಯಂಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ಅಮೆರಿಕದ ವೈಟ್‌ಹೌಸ್‌ನ ಮೇಲ್ವಿಚಾರಣಾ ಸಮಿತಿಯ ಸದಸ್ಯರೊಬ್ಬರ ಸಂದರ್ಶನ ನಡೆಸುತ್ತಿದ್ದ ವೇಳೆ ಸಿಎನ್‌ಎನ್‌ ಸುದ್ದಿ ವಾಹಿನಿಯ ನಿರೂಪಕ ವುಲ್ಫ್ ಬ್ಲಿಟ್ಜರ್ ನೇರ ಪ್ರಸಾರದಲ್ಲೇ ಇನ್ನೇನು ತಾವು ವಾಂತಿ ಮಾಡಿಕೊಳ್ಳುವುದನ್ನು ತಪ್ಪಿಸಿಕೊಂಡರು.

ವಾಷಿಂಗ್ಟನ್‌: ಅಮೆರಿಕದ ವೈಟ್‌ಹೌಸ್‌ನ ಮೇಲ್ವಿಚಾರಣಾ ಸಮಿತಿಯ ಸದಸ್ಯರೊಬ್ಬರ ಸಂದರ್ಶನ ನಡೆಸುತ್ತಿದ್ದ ವೇಳೆ ಸಿಎನ್‌ಎನ್‌ ಸುದ್ದಿ ವಾಹಿನಿಯ ನಿರೂಪಕ ವುಲ್ಫ್ ಬ್ಲಿಟ್ಜರ್ ನೇರ ಪ್ರಸಾರದಲ್ಲೇ ಇನ್ನೇನು ತಾವು ವಾಂತಿ ಮಾಡಿಕೊಳ್ಳುವುದನ್ನು ತಪ್ಪಿಸಿಕೊಂಡರು. 

ಗುರುವಾರ ರಾತ್ರಿ ವೈಟ್‌ಹೌಸ್‌ನ ಜೇಮೀ ರಾಸ್ಕಿನ್ ಎಂಬುವವರನ್ನು ನಿರೂಪಕ ವುಲ್ಫ್‌ ‘ದಿ ಸಿಚುಯೇಶನ್ ರೂಮ್’ ಎಂಬ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಸಂದರ್ಶನ ನಡೆಸುತ್ತಿದ್ದರು.

ಆಗ ಜೇಮೀ, ಅಮೆರಿಕ ಚುನಾವಣೆ ಹಾಗೂ ಡೊನಾಲ್ಡ್‌ ಟ್ರಂಪ್‌ ಕುರಿತು ಮಾತನಾಡುತ್ತಿದ್ದಾಗ ನಿರೂಪಕ ವುಲ್ಫ್‌ ತೀವ್ರ ಅಸಮಾಧಾನಗೊಂಡ ರೀತಿ ತೋರುತ್ತಿದ್ದರು. 

ಇದೇ ವೇಳೆ ಅವರಿಗೆ ವಾಂತಿ ಬಂದಿದ್ದರೂ ತೀರ ಕಷ್ಟಪಟ್ಟು ನಿಗ್ರಹಿಸಿ ಕುಳಿತಿದ್ದರು. ಕೂಡಲೇ ಸುದ್ದಿವಾಹಿನಿಯು ಜಾಹೀರಾತು ಪ್ರಸಾರ ಮಾಡಿತು. ಇದೀಗ ವುಲ್ಫ್‌ ‘ನಾನು ಚೆನ್ನಾಗಿದ್ದೇನೆ’ ಎಂದು ತಿಳಿಸಿದ್ದಾರೆ.

ಸಿಎನ್ಎನ್‌ ವಾಹಿನಿಯ ವುಲ್ಫ್‌ ಬ್ಲಿಟ್ಜರ್ ಅವರಿಗೆ ಲೈವ್‌ ಸಂದರ್ಶನವೊಂದನ್ನು ನಡೆಸುತ್ತಿದ್ದ ವೇಳೆ ಅದನ್ನು ನಿಗ್ರಹಿಸಿಕೊಂಡು ಕುಳಿತಿದ್ದಾರೆ.