ಭಾರತ ಸರ್ಕಾರದ ವಿರುದ್ಧ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನೂನ್ ಕೇಸ್‌ : ಅಮೆರಿಕ ನೋಟಿಸ್‌

| Published : Sep 20 2024, 01:30 AM IST / Updated: Sep 20 2024, 04:43 AM IST

ಸಾರಾಂಶ

ಖಲಿಸ್ತಾನಿ ಉಗ್ರ  ಗುರುಪತ್ವಂತ್ ಸಿಂಗ್ ಪನ್ನೂನ್ , ಭಾರತ ತಮ್ಮ ಹತ್ಯೆಗೆ ಸಂಚು ರೂಪಿಸಿದೆ ಎಂದು ಭಾರತ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ರಾ ಮಾಜಿ ಮುಖ್ಯಸ್ಥ ಸಮಂತ್ ಗೋಯೆಲ್ ವಿರುದ್ಧ ಅಮೆರಿಕದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನವದೆಹಲಿ: ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನೂನ್ , ಭಾರತ ತಮ್ಮ ಹತ್ಯೆಗೆ ಸಂಚು ರೂಪಿಸಿದೆ ಎಂದು ಭಾರತ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ರಾ ಮಾಜಿ ಮುಖ್ಯಸ್ಥ ಸಮಂತ್ ಗೋಯೆಲ್ ವಿರುದ್ಧ ಅಮೆರಿಕದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಭಾರತ ಸರ್ಕಾರ ಮತ್ತು ದೋವೆಲ್‌ಗೆ ನೋಟಿಸ್‌ ನೀಡಿದ್ದು, 21 ದಿನದೊಳಗೆ ಉತ್ತರಿಸುವಂತೆ ಹೇಳಿದೆ.

ಅಮೆರಿಕದ ನ್ಯಾಯಾಲಯ ನೀಡಿರುವ ನೋಟಿಸ್‌ಗೆ ವಿದೇಶಾಂಗ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ‘ಇದು ಸಂಪೂರ್ಣವಾಗಿ ಅನಗತ್ಯವಾದದ್ದು, ಪನ್ನೂನ್ ಕಾನೂನು ಬಾಹಿರ ಸಂಘಟನೆಯಿಂದ ಬಂದವರು. ಅಮೆರಿಕದಲ್ಲಿ ಭಾರತದ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೋಪ ಮಾಡಿರುವ ವ್ಯಕ್ತಿ ಭಾರತದ ನಂಟು ಹೊಂದಿದ್ದಾನೆ. ಇದು ಕಳವಳಕಾರಿ ವಿಚಾರ. ಇದು ಸರ್ಕಾರದ ನೀತಿಗೆ ವಿರುದ್ಧವಾಗಿದೆ’ ಎಂದಿದ್ದಾರೆ.