ಬ್ರಿಟನ್‌ ವಿದೇಶಾಂಗ ಸಚಿವರಾಗಿಮಾಜಿ ಪ್ರಧಾನಿ ಕ್ಯಾಮರೂನ್‌!ನೇಮಕ ಮಾಡಿದ ರಿಷಿ ಸುನಕ್‌

| Published : Nov 14 2023, 01:15 AM IST

ಬ್ರಿಟನ್‌ ವಿದೇಶಾಂಗ ಸಚಿವರಾಗಿಮಾಜಿ ಪ್ರಧಾನಿ ಕ್ಯಾಮರೂನ್‌!ನೇಮಕ ಮಾಡಿದ ರಿಷಿ ಸುನಕ್‌
Share this Article
  • FB
  • TW
  • Linkdin
  • Email

ಸಾರಾಂಶ

ಬ್ರಿಟನ್‌ನ ನೂತನ ವಿದೇಶಾಂಗ ಸಚಿವರಾಗಿ ಡೇವಿಡ್‌ ಕ್ಯಾಮರೂನ್‌ ಅವರನ್ನು ನೇಮಿಸಲಾಗಿದೆ

ಲಂಡನ್‌: ಬ್ರಿಟನ್‌ನ ನೂತನ ವಿದೇಶಾಂಗ ಸಚಿವರಾಗಿ ಡೇವಿಡ್‌ ಕ್ಯಾಮರೂನ್‌ ಅವರನ್ನು ನೇಮಿಸಲಾಗಿದೆ. ಹಾಲಿ ವಿದೇಶಾಂಗ ಸಚಿವ ಜೇಮ್ಸ್‌ ಕ್ಲೆವರ್ರ್ಲಿ ಅವರನ್ನು ಗೃಹ ಸಚಿವರಾಗಿ ನೇಮಿಸಿದ ಬೆನ್ನಲ್ಲೇ ಆ ಸ್ಥಾನಕ್ಕೆ ಕ್ಯಾಮರೂನ್‌ ಅವರನ್ನು ನೇಮಕ ಮಾಡಲಾಗಿದೆ. ವಿಶೇಷವೆಂದರೆ ಕ್ಯಾಮರೂನ್‌ 2010-16ರವರೆಗೆ ಬ್ರಿಟನ್‌ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಅವರು ಪ್ರಧಾನಿ ಹುದ್ದೆಗಿಂತ ಕೆಳಗಿನಿದಾದ ವಿದೇಶಾಂಗ ಸಚಿವರಾಗಿ ನಿಯುಕ್ತಿಗೊಂಡಿದ್ದಾರೆ.ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿರುವ ಕ್ಯಾಮರೂನ್‌, ‘ರಿಷಿ ಸುನಕ್‌ ಇಂಗ್ಲೆಂಡಿನ ಅತ್ಯಂತ ಶಕ್ತಿಯುತ ಪ್ರಧಾನಿಯಾಗಿದ್ದು, ಅವರ ಸಂಪುಟ ಸೇರಲು ಹರ್ಷವಾಗುತ್ತಿದೆ. ಅವರ ನಡುವೆ ಯೂರೋಪಿಯನ್‌ ಯೂನಿಯನ್‌ ವಿಚಾರವಾಗಿ ಭಿನ್ನಾಭಿಪ್ರಾಯವಿದ್ದರೂ ಸಂಪುಟದ ಹಿರಿಯ ಸಹೋದ್ಯೋಗಿಯಾಗಿ ತನ್ನ ಅನುಭವವನ್ನು ರಾಷ್ಟ್ರದ ಏಳಿಗೆಗೆ ದುಡಿಯುವ ನಿಟ್ಟಿನಲ್ಲಿ ಬಳಸುತ್ತೇನೆ’ ಎಂದು ತಿಳಿಸಿದ್ದಾರೆ.