ಸಾರಾಂಶ
ಆಘಾತಕಾರಿ ಘಟನೆಯೊಂದರಲ್ಲಿ, ದಕ್ಷಿಣ ಕೊರಿಯಾದ ಗುಮಿ ಸಿಟಿ ಕೌನ್ಸಿಲ್‌ನಿಂದ ನೇಮಕಗೊಂಡ ಸಹಾಯಕ ರೋಬೋಟ್ ಒಂದು ಕಟ್ಟಡದ ಮೇಲಿಂದ ಬಿದ್ದಿದೆ. ನಂತರ ಅದು ಸಂಪೂರ್ಣ ಕೆಟ್ಟು ಸ್ತಬ್ಧವಾಗಿದೆ. ಈ ಘಟನೆಯನ್ನು ‘ದೇಶದ ಮೊದಲ ರೋಬೋಟ್ ಆತ್ಮಹತ್ಯೆ’ ಎಂದು ಕೆಲವು ಮಾಧ್ಯಮಗಳು ಬಣ್ಣಿಸಿವೆ.
ಸೋಲ್: ಆಘಾತಕಾರಿ ಘಟನೆಯೊಂದರಲ್ಲಿ, ದಕ್ಷಿಣ ಕೊರಿಯಾದ ಗುಮಿ ಸಿಟಿ ಕೌನ್ಸಿಲ್‌ನಿಂದ ನೇಮಕಗೊಂಡ ಸಹಾಯಕ ರೋಬೋಟ್ ಒಂದು ಕಟ್ಟಡದ ಮೇಲಿಂದ ಬಿದ್ದಿದೆ. ನಂತರ ಅದು ಸಂಪೂರ್ಣ ಕೆಟ್ಟು ಸ್ತಬ್ಧವಾಗಿದೆ. ಈ ಘಟನೆಯನ್ನು ‘ದೇಶದ ಮೊದಲ ರೋಬೋಟ್ ಆತ್ಮಹತ್ಯೆ’ ಎಂದು ಕೆಲವು ಮಾಧ್ಯಮಗಳು ಬಣ್ಣಿಸಿವೆ.
ಈ ರೋಬೋಟ್ ಅನ್ನು ಕಚೇರಿಯ ಕೆಲಸಗಳಿಗೆ ಸಹಾಯ ಮಾಡಲು, ಅಂದರೆ ಕಡತ ತಂದುಕೊಡಲು ಹಾಗೂ ಇತ್ಯಾದಿ ಕೆಲಸಕ್ಕೆ ನೇಮಿಸಲಾಗಿತ್ತು.ಆದರೆ ತಜ್ಞರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ‘ಇದನ್ನು ಆತ್ಮಹತ್ಯೆ ಎನ್ನಲಾಗದು. ಇದರಲ್ಲಿ ತಾಂತ್ರಿಕ ವೈಫಲ್ಯ ಆಗಿದ್ದು, ಹೀಗಾಗಿ ಕಟ್ಟಡದ ಮೇಲಿಂದ ಬಿದ್ದಿರಬಹುದು’ ಎಂದಿದ್ದಾರೆ. ಈ ಬಗ್ಗೆ ತನಿಖೆ ನಡೆಇದೆ.