ಅಮೆರಿಕ : ದೇಶದಲ್ಲಿ ಜನಿಸುವ ಮಕ್ಕಳಿಗೆ ಜನ್ಮಸಿದ್ಧ ಪೌರತ್ವ ರದ್ದತಿಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಚಿಂತನೆ

| Published : Dec 12 2024, 12:30 AM IST / Updated: Dec 12 2024, 04:13 AM IST

Donald Trump

ಸಾರಾಂಶ

ಮುಂದಿನ ವರ್ಷ ಜನವರಿಯಲ್ಲಿ ಅಮೆರಿಕದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಳ್ಳಲಿರುವ ಡೊನಾಲ್ಡ್‌ ಟ್ರಂಪ್, ದೇಶದಲ್ಲಿ ಜನಿಸುವ ಮಕ್ಕಳಿಗೆ ಜನ್ಮಸಿದ್ಧವಾಗಿ ಅಮೆರಿಕದ ಪೌರತ್ವ ನೀಡುವ ಕಾನೂನನ್ನು ರದ್ದುಪಡಿಸುವ ಚಿಂತನೆ ನಡೆಸುತ್ತಿದ್ದಾರೆ.

ವಾಷಿಂಗ್ಟನ್‌: ಮುಂದಿನ ವರ್ಷ ಜನವರಿಯಲ್ಲಿ ಅಮೆರಿಕದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಳ್ಳಲಿರುವ ಡೊನಾಲ್ಡ್‌ ಟ್ರಂಪ್, ದೇಶದಲ್ಲಿ ಜನಿಸುವ ಮಕ್ಕಳಿಗೆ ಜನ್ಮಸಿದ್ಧವಾಗಿ ಅಮೆರಿಕದ ಪೌರತ್ವ ನೀಡುವ ಕಾನೂನನ್ನು ರದ್ದುಪಡಿಸುವ ಚಿಂತನೆ ನಡೆಸುತ್ತಿದ್ದಾರೆ.

ಈ ಕಾನೂನಿನ ಪ್ರಕಾರ ಹೆತ್ತವರು ಯಾವುದೇ ದೇಶದವರಾಗಿದ್ದರೂ, ಅಮೆರಿಕದಲ್ಲಿ ಜನಿಸಿದ ಮಕ್ಕಳು ಸ್ವಾಭಾವಿಕವಾಗಿ ಅಮೆರಿಕದ ಪೌರತ್ವವನ್ನು ಪಡೆಯಬಹುದಾಗಿದೆ. ಈ ಅವಕಾಶವನ್ನು ಬಳಸಿಕೊಂಡು ಅನೇಕರು ಅಮೆರಿಕಕ್ಕೆ ಹೋಗಿ ಮಕ್ಕಳನ್ನು ಹೆರುವ ತಂತ್ರ (ಬರ್ತ್‌ ಟೂರಿಸಂ) ಅನುಸರಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಇದೀಗ ಟ್ರಂಪ್‌ ನಿರ್ಧರಿಸಿದ್ದಾರೆ.

ಭಾರತೀಯರಿಗೆ ತೊಂದರೆ?:

2022ರ ಜನಗಣತಿಯ ಪ್ರಕಾರ ಅಮೆರಿಕದಲ್ಲಿ ಒಟ್ಟು 48 ಲಕ್ಷ ಭಾರತೀಯ ಮೂಲದವರಿದ್ದಾರೆ. ಇವರಲ್ಲಿ ಶೇ.34ರಷ್ಟು(16 ಲಕ್ಷ) ಮಂದಿ ಅಮೆರಿಕದಲ್ಲಿ ಜನಿಸಿದವರಾಗಿದ್ದು, ಜನ್ಮಸಿದ್ಧ ಪೌರತ್ವ ಕಾನೂನಿನಡಿಯಲ್ಲಿ ಅಮೆರಿಕದ ಪ್ರಜೆಯಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಟ್ರಂಪ್‌ರ ಈ ನಿರ್ಧಾರದಿಂದ ಅನೇಕ ಭಾರತೀಯರಿಗೆ ತೊಂದರೆಯಾಗುವ ಸಾಧ್ಯತೆಯಿದೆ.