ಸಾರಾಂಶ
3ನೇ ಯತ್ನದಲ್ಲಿ ಯಶ ಕಂಡ ಮಸ್ಕ್ ವಿಶ್ವದ ಶಕ್ತಿಯುತ ರಾಕೆಟ್ ಎಂದೇ ಬಿಂಬಿತವಾಗಿರುವ ಸ್ಟಾರ್‌ಶಿಪ್‌ಅನ್ನು ನಭಕ್ಕೆ ಹಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೋಕಾಚಿಕಾ (ಅಮೆರಿಕ): ವಿಶ್ವದ ಅತ್ಯಂತ ಶಕ್ತಿಯುತ ರಾಕೆಟ್ ಎಂದೇ ಬಿಂಬಿತವಾಗಿರುವ ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಸಂಸ್ಥೆಯ ಸ್ಟಾರ್‌ಶಿಪ್ ಗುರುವಾರದಂದು ಯಶಸ್ವಿಯಾಗಿ ಆಗಸಕ್ಕೆ ಉಡಾವಣೆಯಾಗಿದೆ. ಭಾರತೀಯ ಕಾಲಮಾನ ಸಂಜೆ 7 ಗಂಟೆ ಸುಮಾರಿಗೆ ಸ್ಪೇಸ್‌ಎಕ್ಸ್ ಸಂಸ್ಥೆಯ ದಕ್ಷಿಣ ಟೆಕ್ಸಾಸ್‌ನಲ್ಲಿರುವ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಾಯಿತು. ಸ್ಟಾರ್‌ಶಿಪ್ ರಾಕೆಟ್‌ನ ಮೂಲಕ ಭವಿಷ್ಯದಲ್ಲಿ ಚಂದ್ರನ ಅಂಗಳದಲ್ಲಿ ಗಗನಯಾನಿಗಳನ್ನು ಇಳಿಸಲು ನಾಸಾ ಯೋಜನೆ ಹಾಕಿಕೊಂಡಿದ್ದರೆ ಸ್ಪೇಸ್‌ಎಕ್ಸ್ ಸಂಸ್ಥೆ ಇದರ ಮೂಲಕ ಮಂಗಳ ಗ್ರಹದಲ್ಲಿ ತನ್ನ ವಸಾಹತು ಸ್ಥಾಪಿಸುವ ಮಹತ್ವಾಕಾಂಕ್ಷೆ ಹೊಂದಿದೆ. ಇದಕ್ಕೂ ಮೊದಲು ಸ್ಪೇಸ್‌ಎಕ್ಸ್ ಸಂಸ್ಥೆ ಎರಡು ಬಾರಿ ಈ ರಾಕೆಟ್ ಉಡಾವಣೆ ಮಾಡುವಲ್ಲಿ ವಿಫಲ ಯತ್ನ ಮಾಡಿತ್ತು.