12ನೇ ಮಗುವಿಗೆ ತಂದೆಯಾದ ವಿಶ್ವದ ನಂ.1 ಶ್ರೀಮಂತ ಮಸ್ಕ್‌!

| Published : Jun 24 2024, 01:31 AM IST / Updated: Jun 24 2024, 03:18 AM IST

ಸಾರಾಂಶ

ಅಮೆರಿಕದಲ್ಲಿರುವ ವಿಶ್ವದ ನಂ.1 ಶ್ರೀಮಂತ, ಟೆಸ್ಲಾ ಕಂಪನಿಯ ಮಾಲೀಕ ಎಲಾನ್‌ ಮಸ್ಕ್‌ ಈಗ 12ನೇ ಮಗುವಿನ ತಂದೆಯಾಗಿದ್ದಾರೆ.

ನ್ಯೂಯಾರ್ಕ್‌: ಅಮೆರಿಕದಲ್ಲಿರುವ ವಿಶ್ವದ ನಂ.1 ಶ್ರೀಮಂತ, ಟೆಸ್ಲಾ ಕಂಪನಿಯ ಮಾಲೀಕ ಎಲಾನ್‌ ಮಸ್ಕ್‌ ಈಗ 12ನೇ ಮಗುವಿನ ತಂದೆಯಾಗಿದ್ದಾರೆ.

ಅನಾರೋಗ್ಯಪೀಡಿತ ಮನುಷ್ಯರ ಮೆದುಳಿಗೆ ಚಿಪ್‌ ಸೇರಿಸಿ ಅವರ ಆರೋಗ್ಯ ಸುಧಾರಿಸಲು ಮಸ್ಕ್‌ ಸ್ಥಾಪಿಸಿರುವ ನ್ಯೂರಾಲಿಂಕ್‌ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿರುವ ಶಿವೋನ್‌ ಜಿಲಿಸ್‌ ಕಳೆದ ಜನವರಿಯಲ್ಲಿ ಮೂರನೇ ಮಗುವಿಗೆ ಜನ್ಮ ನೀಡಿದ್ದಾರೆ. ಇದು ಮಸ್ಕ್‌- ಶಿವೋನ್‌ ಸಂಬಂಧದಿಂದ ಜನಿಸಿದ ಮಗು ಎಂದು ಬ್ಲೂಂಬರ್ಗ್‌ ನ್ಯೂಸ್‌ ವರದಿ ಮಾಡಿದೆ. 2021ರಲ್ಲಿ ಮಸ್ಕ್‌ ಮತ್ತು ಜಿಲಿಸ್‌ಗೆ ಅವಳಿ ಮಕ್ಕಳು ಜನಿಸಿದ್ದರು.

ಮಸ್ಕ್ ತಮ್ಮ ಮೊದಲ ಪತ್ನಿ, ಕೆನಡಾದ ಲೇಖಕಿ ಜಸ್ಟಿನ್‌ ವಿಲ್ಸನ್‌ರೊಂದಿಗೆ ಈಗಾಗಲೇ 6 ಮಕ್ಕಳನ್ನು ಹೊಂದಿದ್ದಾರೆ. ಅದೇ ರೀತಿ ಗಾಯಕಿ ಗ್ರಿಮ್ಸ್‌ ಜೊತೆಗೂ ಮಸ್ಕ್‌ 3 ಮಕ್ಕಳನ್ನು ಹೊಂದಿದ್ದಾರೆ.

2021ರಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಮಸ್ಕ್‌, ಜನರು ಹೆಚ್ಚುಹೆಚ್ಚು ಮಕ್ಕಳನ್ನು ಹೆರದೇ ಹೋದಲ್ಲಿ ಮುಂದೊಂದು ದಿನ ನಾಗರಿಕತೆಯೇ ಅವನತಿ ಹೊಂದುತ್ತದೆ, ಬೇಕಿದ್ದರೆ ನನ್ನ ಮಾತನ್ನು ಬರೆದಿಟ್ಟುಕೊಳ್ಳಿ ಎಂದಿದ್ದರು.