ವಿಶ್ವಾದ್ಯಂತ ಫೇಸ್ಬುಕ್‌, ಇನ್ಸ್‌ಟಾ, ಸರ್ವರ್‌ ಡೌನ್‌

| Published : Mar 06 2024, 02:16 AM IST

ಸಾರಾಂಶ

ಮಂಗಳವಾರ ರಾತ್ರಿ ಒಂದು ಗಂಟೆಗೂ ಹೆಚ್ಚು ಕಾಲ ಫೇಸ್ಬುಕ್‌ ಮತ್ತು ಇನ್‌ಸ್ಟಾಗ್ರಾಂ ಜಾಲತಾಣಗಳ ಸರ್ವರ್‌ ಡೌನ್‌ ಆದ ಪರಿಣಾಮ ಸಾರ್ವಜನಿಕರು ವಿಶ್ವದಾದ್ಯಂತ ಪರದಾಡುವಂತಾಯಿತು.

ವಾಷಿಂಗ್ಟನ್‌: ಜಗತ್ತಿನ ಪ್ರಮುಖ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್‌, ಇನ್ಸ್ಟಾಗ್ರಾಂ, ಮೆಸೆಂಜರ್‌ ಹಾಗೂ ತ್ರೆಡ್‌ ಮಂಗಳವಾರ ತಾಂತ್ರಿಕ ಸಮಸ್ಯೆಗೆ ಒಳಗಾಗಿತ್ತು.

ಹೀಗಾಗಿ ವಿಶ್ವಾದ್ಯಂತ ಕೋಟ್ಯಂತರ ಜನರು ಹಲವು ಗಂಟೆಗಳ ಕಾಲ ಈ ತಾಣಗಳಿಗೆ ಲಾಗಿನ್‌ ಆಗಲಾಗದೇ ಸಮಸ್ಯೆ ಎದುರಿಸುವಂತಾಯಿತು.

ಕೆಲ ಜನರು ಅಕೌಂಟ್‌ ಹ್ಯಾಕ್‌ ಆಗಿದೆಯೇ ಎಂದು ಭಯಭೀತರಾದರು.

ಇದನ್ನೇ ಲಾಭ ಪಡೆದ ಜನರು ಟ್ವೀಟರ್‌ನಲ್ಲಿ ಮೀಮ್ಸ್‌ ಮಳೆಗರೆದರು.

ಇದೊಂದು ತಾಂತ್ರಿಕ ಸಮಸ್ಯೆಯಾಗಿದೆ, ಸಮಸ್ಯೆ ಶೀಘ್ರ ಬಗೆಹರಿಸಲಾಗುತ್ತದೆ ಎಂದು ಈ ತಾಣಗಳ ಮಾತೃಸಂಸ್ಥೆಯಾದ ಮೆಟಾ ತಿಳಿಸಿತು.