ಭಾರತೀಯ ಯುವತಿ ಹುಡುಕಿಕೊಟ್ಟವರಿಗೆ 8.5 ಲಕ್ಷ ರು. ಬಹುಮಾನ

| Published : Dec 23 2023, 01:45 AM IST

ಸಾರಾಂಶ

ಅಮೆರಿಕದ ನ್ಯೂಜೆರ್ಸಿಯಲ್ಲಿ 4 ವರ್ಷದಿಂದ ಕಾಣೆಯಾಗಿರುವ ಯುವತಿ ಮಯೂಷಿಯ ಬಗ್ಗೆ ಸುಳಿವು ನೀಡುವವರಿಗೆ 10 ಸಾವಿರ ಡಾಲರ್‌ ಬಹುಮಾನವನ್ನು ಅಮೆರಿಕ ಘೋಷಿಸಿದೆ.

ನ್ಯೂಯಾರ್ಕ್‌: ಭಾರತೀಯ ಯುವತಿ ಮಾಯೂಷಿ ಭಗತ್‌ (29) ಅವರ ಕುರಿತು ಸುಳಿವು ನೀಡಿದವರಿಗೆ 8.5 ಲಕ್ಷ ರು.ವರೆಗೂ ಪಾರಿತೋಷಕ ನೀಡುವುದಾಗಿ ಅಮೆರಿಕ ತನಿಖಾ ಸಂಸ್ಥೆ ಎಫ್‌ಬಿಐ ಪ್ರಕಟಿಸಿದೆ.5 ಅಡಿ 10 ಇಂಚು ಎತ್ತರ, ಕಪ್ಪು ತಲೆಗೂದಲು ಮತ್ತು ಕಂದು ಬಣ್ಣದ ನಯನವುಳ್ಳ ಮಾಯೂಷಿ ಅಮೆರಿಕಾದ ನ್ಯೂಜೆರ್ಸಿಯಲ್ಲಿ ವಿದ್ಯಾರ್ಥಿನಿಯಾಗಿದ್ದು, ಏ.29, 2019ರಿಂದ ಕಾಣೆಯಾಗಿದ್ದಾಳೆ. ಕೊನೆಯ ಬಾರಿ ಆಕೆ ನ್ಯೂಜೆರ್ಸಿಯಲ್ಲಿ ತನ್ನ ಮನೆಯಿಂದ ಹೊರಡುವಾಗ ಕಪ್ಪು ಬಣ್ಣದ ಟಿ-ಶರ್ಟ್‌ ಹಾಗೂ ಬಣ್ಣದ ಪೈಜಾಮ ಧರಿಸಿದ್ದಳು ಎಂದು ನ್ಯೂಜೆರ್ಸಿ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಆಕೆಯ ಪೋಷಕರು ಎರಡು ದಿನಗಳ ಬಳಿಕ ದೂರು ನೀಡಿದ್ದು, ಈವರೆಗೂ ಪತ್ತೆಯಾಗದ ಹಿನ್ನೆಲೆಯಲ್ಲಿ ಎಫ್‌ಬಿಐ ಈಕೆಯನ್ನು ‘ಮೋಸ್ಟ್‌ ವಾಂಟೆಡ್‌’ ಪಟ್ಟಿಗೆ ಸೇರಿಸಿ ಹುಡುಕುವಲ್ಲಿ ಸಾರ್ವಜನಿಕರ ಸಹಕಾರವನ್ನು ಕೋರಿದೆ.