ಹೌಸ್‌ಬೋಟ್‌ಗೆ ಬೆಂಕಿ:ಕಾಶ್ಮೀರದಲ್ಲಿ ಮೂವರುವಿದೇಶಿಗರು ಸಾವು

| Published : Nov 12 2023, 01:00 AM IST

ಸಾರಾಂಶ

ದಾಲ್‌ ಸರೋವರದ ಬಳಿ ಶನಿವಾರ ಐದು ಹೌಸ್‌ಬೋಟ್‌ಗಳಿಗೆ ಬೆಂಕಿ ಹೊತ್ತಿಕೊಂಡು ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಬಾಂಗ್ಲಾದೇಶದ ಮೂವರು ವಿದೇಶಿ ಪ್ರವಾಸಿಗರು ಸಾವನ್ನಪ್ಪಿದ್ದಾರೆ.

ಶ್ರೀನಗರ: ಪ್ರಸಿದ್ಧ ದಾಲ್‌ ಸರೋವರದ ಬಳಿ ಶನಿವಾರ ಐದು ಹೌಸ್‌ಬೋಟ್‌ಗಳಿಗೆ ಬೆಂಕಿ ಹೊತ್ತಿಕೊಂಡು ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಬಾಂಗ್ಲಾದೇಶದ ಮೂವರು ವಿದೇಶಿ ಪ್ರವಾಸಿಗರು ಸಾವನ್ನಪ್ಪಿದ್ದಾರೆ.

ಗುರುತಿಸಲು ಸಾಧ್ಯವಾಗದಷ್ಟು ಮೂರು ದೇಹಗಳು ಸುಟ್ಟು ಕರಕಲಾಗಿವೆ. ಹೌಸ್‌ಬೋಟ್‌ಗಳಿಗೆ ಹೊಂದಿಕೊಂಡಿದ್ದ ಕೆಲ ಗುಡಿಸಲುಗಳೂ ಸುಟ್ಟು ಹೋಗಿವೆ ಹಾಗೂ ಕೋಟ್ಯಂತರ ಮೌಲ್ಯದ ವಸ್ತುಗಳು ನಾಶವಾಗಿವೆ. ಬೆಂಕಿಗೆ ನಿಖರ ಕಾರಣ ತಿಳಿದು ಬಂದಿಲ್ಲ ಹಾಗೂ ಆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇನ್ನು ಮೃತರ ಡಿಎನ್‌ಎ ಪರೀಕ್ಷೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.