ಸಾರಾಂಶ
ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಭೀಕರ ಯುದ್ಧದಲ್ಲಿ ಈವರೆಗೆ ಗಾಜಾ ಪಟ್ಟಿಯಲ್ಲಿ ಒಟ್ಟು 29,000 ಜನ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಆರೋಗ್ಯ ಸಚಿವಾಲಯ ಘೋಷಿಸಿದೆ.
ರಫಾ (ಗಾಜಾ): ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಭೀಕರ ಯುದ್ಧದಲ್ಲಿ ಈವರೆಗೆ ಗಾಜಾ ಪಟ್ಟಿಯಲ್ಲಿ ಒಟ್ಟು 29,000 ಜನ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಆರೋಗ್ಯ ಸಚಿವಾಲಯ ಘೋಷಿಸಿದೆ.
‘ಕಳೆದ 24 ಗಂಟೆಗಳಲ್ಲಿ 107 ಮೃತದೇಹಗಳನ್ನು ಆಸ್ಪತ್ರೆಗಳಿಗೆ ತರಲಾಗಿದೆ. ಯುದ್ಧದಲ್ಲಿ ಈವರೆಗಿನ ಒಟ್ಟು ಸಾವಿನ ಸಂಖ್ಯೆ 29,092ಕ್ಕೆ ಏರಿಕೆಯಾಗಿದೆ.
ಬಲಿಯಾದವರಲ್ಲಿ 3ನೇ 2ರಷ್ಟು ಜನ ಮಹಿಳೆಯರು ಹಾಗೂ ಮಕ್ಕಳು. ಉಳಿದಂತೆ 69,000 ಜನರು ಯುದ್ಧದಲ್ಲಿ ಗಾಯಗೊಂಡಿದ್ದಾರೆ’ ಎಂದು ಅದು ತಿಳಿಸಿದೆ.
ಕಳೆದ ಅ.7ರಂದು ಹಮಾಸ್ ಉಗ್ರರು ಇಸ್ರೇಲ್‌ಗೆ ನುಗ್ಗಿ 1,200 ಜನರನ್ನು ಹತ್ಯೆಗೈದಿತ್ತು. ಅಲ್ಲದೇ ಇಸ್ರೇಲಿ ಒತ್ತೆಯಾಳುಗಳನ್ನು ಕರೆತಂದಿತ್ತು. ಬಳಿಕ ಇಸ್ರೇಲ್ ಪ್ಯಾಲೆಸ್ತೀನ್ ಮೇಲೆ ಭೀಕರ ದಾಳಿ ನಡೆಸುತ್ತಿದೆ.