ಸಾರಾಂಶ
ಕೇಂದ್ರ ಚೀನಾದಲ್ಲಿ 7 ಲಕ್ಷ ಕೋಟಿ ರು. (83 ಶತಕೋಟಿ ಅಮೆರಿಕ ಡಾಲರ್) ಮೌಲ್ಯದ ಅಂದಾಜು ಒಂದು ಸಾವಿರ ಮೆಟ್ರಿಕ್ ಟನ್ ಉತ್ತಮ ಗುಣಮಟ್ಟದ ವಿಶ್ವದ ಅತಿದೊಡ್ಡ ಚಿನ್ನದ ಅದಿರು ನಿಕ್ಷೇಪ ಪತ್ತೆಯಾಗಿದೆ.
ನವದೆಹಲಿ: ಕೇಂದ್ರ ಚೀನಾದಲ್ಲಿ 7 ಲಕ್ಷ ಕೋಟಿ ರು. (83 ಶತಕೋಟಿ ಅಮೆರಿಕ ಡಾಲರ್) ಮೌಲ್ಯದ ಅಂದಾಜು ಒಂದು ಸಾವಿರ ಮೆಟ್ರಿಕ್ ಟನ್ ಉತ್ತಮ ಗುಣಮಟ್ಟದ ವಿಶ್ವದ ಅತಿದೊಡ್ಡ ಚಿನ್ನದ ಅದಿರು ನಿಕ್ಷೇಪ ಪತ್ತೆಯಾಗಿದೆ.
ಪಿಂಗ್ವಿಯಾಂಗ್‌ನ ಈಶಾನ್ಯ ಹುನಾನ್ ಕೌಂಟಿ ಪ್ರಾಂತ್ಯದ ಬಳಿ 2 ಕಿ.ಮೀ.ಆಳದಲ್ಲಿ ಚಿನ್ನದ ಅದಿರು ನಿಕ್ಷೇಪದ 40 ಸುರಂಗಗಳು ಪತ್ತೆಯಾಗಿರುವುದಾಗಿ ಇಲ್ಲಿಯ ಭೂವೈಜ್ಞಾನಿಕ ಕಾರ್ಯಾಲಯ ಘೋಷಿಸಿದೆ. ಇದು ಇದುವರೆಗಿನ ಅತಿದೊಡ್ಡ ಮತ್ತು ಅತ್ಯಂತ ಲಾಭದಾಯದ ಚಿನ್ನದ ಅದಿರು ನಿಕ್ಷೇಪದ ಆವಿಷ್ಕಾರವಾಗಿದೆ ಎಂದು ನ್ಯೂಸ್ ಡಾಟ್ ಎಜೆಡ್ ವರದಿ ಮಾಡಿದೆ.
‘ಹಲವು ಕೊರೆದ ಸುರಂಗಗಳಲ್ಲಿ ಬರಿಗಣ್ಣಿಗೆ ಗೋಚರಿಸುವ ಚಿನ್ನವನ್ನು ತೋರಿಸುತ್ತಿವೆ. ಪ್ರತಿ ಮೆಟ್ರಿಕ್ ಟನ್ ಚಿನ್ನದ ಅದಿರು 138 ಗ್ರಾಂ ಚಿನ್ನವನ್ನು ಹೊಂದಿರಬಹುದು ಎಂದು ಸೂಚಿಸುತ್ತವೆ. ಇವು ಭೂಗರ್ಭದ ಗಣಿಗಳಲ್ಲಿ ದೊರೆಯುವ ಉತ್ತಮ ಚಿನ್ನಕ್ಕಿಂತಲೂ ಉತ್ಕೃಷ್ಠ ಗುಣಮಟ್ಟ ಹೊಂದಿದೆ ಎಂದು ಭೂವೈಜ್ಞಾನಿಕ ಕಾರ್ಯಾಲಯದ ಚೆನ್ ರುಲಿನ್ ಹೇಳಿದ್ದಾರೆ.