ಅಲ್‌ ಶಿಫಾ ಆಸ್ಪತ್ರೆ ನೆಲಮಾಳಿಗೆಯೇಹಮಾಸ್‌ ಉಗ್ರರ ಕೇಂದ್ರ ಕಚೇರಿ?

| Published : Oct 29 2023, 01:00 AM IST / Updated: Oct 29 2023, 01:01 AM IST

ಅಲ್‌ ಶಿಫಾ ಆಸ್ಪತ್ರೆ ನೆಲಮಾಳಿಗೆಯೇಹಮಾಸ್‌ ಉಗ್ರರ ಕೇಂದ್ರ ಕಚೇರಿ?
Share this Article
  • FB
  • TW
  • Linkdin
  • Email

ಸಾರಾಂಶ

ಕಾಶಿ ವಿಶ್ವನಾಥ ದೇಗುಲದಲ್ಲಿ ವಸ್ತ್ರ ಸಂಹಿತೆ ಅಳವಡಿಸುವ ಕುರಿತು ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅಧ್ಯಕ್ಷ ನಾಗೇಶ್‌ ಪಾಂಡೆ ತಿಳಿಸಿದ್ದಾರೆ
ನವದೆಹಲಿ: ಜನವಸತಿ ಪ್ರದೇಶಗಳು, ಆಸ್ಪತ್ರೆಗಳ ಮೇಲೆ ಇಸ್ರೇಲ್‌ ದಾಳಿ ನಡೆಸುವುದಿಲ್ಲ ಎಂದು ಮನಗಂಡ ಹಮಾಸ್‌ ಬಂಡುಕೋರರು ಗಾಜಾದ ಅಲ್‌ ಶಿಫಾ ಆಸ್ಪತ್ರೆಯನ್ನೇ ತನ್ನ ದಾಳಿಯ ಕಾರ್ಯಾಚರಣೆ ನೆಲೆಯಾಗಿಸಿಕೊಂಡಿದೆ ಎಂಬ ಅಂಶ ಈಗ ಬೆಳಕಿಗೆ ಬಂದಿದೆ. ಗಾಜಾದಲ್ಲಿಯ ಬೃಹತ್‌ ಆಸ್ಪತ್ರೆ ಎನಿಸಿರುವ ಅಲ್‌ ಶಿಫಾದಲ್ಲಿ ಗುಪ್ತ ಸುರಂಗಗಳನ್ನೇ ಹಮಾಸ್‌ ತನ್ನ ನೆಲೆಯಾಗಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿದೆ ಎಂದು ಇಸ್ರೇಲ್‌ ಸೇನೆ ಆರೋಪಿಸಿದೆ. ಈ ಸಂಬಂಧ ಕೆಲವು ಆಡಿಯೋ ಮತ್ತು ವಿಡಿಯೋ ತುಣುಕುಗಳನ್ನು ಬಿಡುಗಡೆಗೊಳಿಸಿರುವ ಇಸ್ರೇಲ್‌ ಸೇನೆ, ಶಿಫಾ ಆಸ್ಪತ್ರೆಯ ಕೆಳಗೆ ಅಲ್ಲಿನ ಸುರಂಗಗಳ ಮೂಲಕ ಭೂಗತ ಕಾರ್ಯಾಚರಣೆ ನಡೆಸುತ್ತಿದೆ. ಆಸ್ಪತ್ರೆಯಲ್ಲಿ ಅನೇಕ ಸುರಂಗಗಳು ಮತ್ತು ಗುಪ್ತ ಮಾರ್ಗಗಳಿವೆ ಎಂದು ಹೇಳಿದೆ. ಬಾಂಬ್‌ ದಾಳಿಯಲ್ಲಿ ಗಾಯಗೊಂಡವರು ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿನ ಸುರಂಗಗಳ ಮೂಲಕವೇ ಹಮಾಸ್‌ ಬಂಡುಕೋರರು ಪ್ರವೇಶಿಸಿ ತಮ್ಮ ಕಾರ್ಯಾಚರಣೆ ನಡೆಸುತ್ತಾರೆ. ‘ಆಸ್ಪತ್ರೆಯಲ್ಲಿ ಒಂದು ವಾರ್ಡ್‌ನಿಂದ ಮತ್ತೊಂದಕ್ಕೆ ತೆರಳಲು ಗುಪ್ತ ಮಾರ್ಗಗಳಿದ್ದು ಹಮಾಸ್‌ ಬಂಡುಕೋರರು ಇವುಗಳ ಮೂಲಕವೇ ಸಂಚರಿಸುತ್ತಾರೆ. ಹಮಾಸ್‌ ಆಸ್ಪತ್ರೆಯ ಗುಪ್ತ ಮಾರ್ಗಗಳಲ್ಲಿ ಸಂಚರಿಸುವ ಕೆಲವು ವಿಡಿಯೋ ತುಣುಕುಗಳಲ್ಲಿ ಕಾಣಬಹುದು’ ಎಂದು ಸೇನೆ ಹೇಳಿದೆ. ಆದರೆ ಈ ಆರೋಪವನ್ನು ಹಮಾಸ್‌ ತಳ್ಳಿ ಹಾಕಿದೆ.