ಸಾರಾಂಶ
ಗುಜರಾತ್ ಮೂಲದ ಅಮೆರಿಕ ವ್ಯಾಪಾರಿಗಳಲ್ಲಿದ್ದ ಕಲಹಕ್ಕೆ ಕೊನೆಗೂ ಕೋರ್ಟ್ ತಾರ್ಕಿಕ ಅಂತ್ಯ ಕಾಣಿಸಿದ್ದು, ಹರೇಶ್ ತಮ್ಮ ಸೋದರರಿಗೆ 20 ಸಾವಿರ ಕೋಟಿ ರು. ಪರಿಹಾರ ನೀಡಬೇಕೆಂದು ಆದೇಶಿಸಿದ್ದಾರೆ.
ವಾಷಿಂಗ್ಟನ್: ಚಾರ್ಲ್ಸ್ ಡಿಕೆನ್ಸ್ ಅವರ ಬ್ಲೀಕ್ ಹೌಸ್ ಕಾದಂಬರಿಯಲ್ಲಿ ಬರುವ ಜಾರ್ನ್‌ಡೈಸ್ ಪ್ರಕರಣ ಹೋಲುವ ರೀತಿಯಲ್ಲಿ ಅಮೆರಿಕದಲ್ಲಿ ನಡೆಯುತ್ತಿದ್ದ ಜೋಗಾನಿ ಕೌಟುಂಬಿಕ ಕಲಹ ಕೊನೆಗೂ ನ್ಯಾಯಾಲಯದ ತೀರ್ಪಿನೊಂದಿಗೆ ಅಂತ್ಯಗೊಂಡಿದೆ. ಸ್ಥಳೀಯ ನ್ಯಾಯಾಲಯವು ಹರೇಶ್ ಜೋಗಾನಿ ಅವರು ತಮ್ಮ ನಾಲ್ಕು ಸೋದರರಿಗೆ 20 ಸಾವಿರ ಕೋಟಿ ರು. ಪರಿಹಾರದ ಜೊತೆಗೆ ತಮ್ಮ ಷೇರಿನಲ್ಲಿ ಸೂಕ್ತ ಪಾಲನ್ನು ಕೊಡಬೇಕೆಂಬುದಾಗಿ ಆದೇಶಿಸಿದೆ. ಜೋಗಾನಿ ಕುಟುಂಬವು 1969ರಲ್ಲಿ ಕ್ಯಾಲಿಫೋರ್ನಿಯಾಗೆ ತೆರಳಿ ವಜ್ರ ವ್ಯಾಪಾರ ಆರಂಭಿಸಿ ವಿಶ್ವದಾದ್ಯಂತ ಬೃಹತ್ ಸಾಮ್ರಾಜ್ಯ ಕಟ್ಟಿತ್ತು. ನಂತರ 2003ರಲ್ಲಿ ಅವರ ಸೋದರರು ತಮಗೆ ಸೂಕ್ತ ಪಾಲು ನೀಡಬೇಕೆಂದು ನ್ಯಾಯಾಲಯದಲ್ಲಿ ಶಶಿಕಾಂತ್ ಜೋಗಾನಿ ದಾವೆ ಹೂಡಿದ್ದರು. ಈ ಪ್ರಕರಣದಲ್ಲಿ ಉಭಯ ಪಕ್ಷದವರು ಬರೋಬ್ಬರಿ 18 ಬಾರಿ ಮೆಲ್ಮನವಿ ಸಲ್ಲಿಸಿದ್ದರು. ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಕುಟುಂಬಕ್ಕೆ ಸೇರಿದ 17 ಸಾವಿರ ಬ್ಲಾಕ್‌ಗಳಿರುವ ಅಪಾರ್ಟ್‌ಮೆಂಟ್ ಕುರಿತಾಗಿ ಸೋದರರ ನಡುವೆ ಬಿಕ್ಕಟ್ಟು ತಲೆದೋರಿತ್ತು.