ಸಾರಾಂಶ
ಇತ್ತೀಚೆಗೆ ಕೆಂಪು ಸಮುದ್ರದಲ್ಲಿ ಹಡಗುಗಳನ್ನು ಅಪಹರಣ ಮಾಡುತ್ತಿದ್ದ ಹೌತಿ ಉಗ್ರರರ ನೆಲೆಗಳ ಮೇಲೆ ಅಮೆರಿಕ ಹಾಗೂ ಬ್ರಿಟನ್ ನೌಕಾಪಡೆಗಳು ದಾಳಿ ನಡೆಸಿವೆ. ಇದರಿಂದಾಗಿ ಒಟ್ಟು ಐವರು ಉಗ್ರರು ಹತರಾಗಿದ್ದಾರೆ.
ದುಬೈ: ಇತ್ತೀಚೆಗೆ ಕೆಂಪು ಸಮುದ್ರದಲ್ಲಿ ಸಾಗು ತ್ತಿದ್ದ ಹಡಗುಗಳ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತೀಕವಾಗಿ ಅಮೆರಿಕ ಹಾಗೂ ಬ್ರಿಟನ್ ನೌಕಾಪಡೆಗಳು ಹೌತಿ ಉಗ್ರರ ನೆಲೆಗಳ ಮೇಲೆ ಜಲದಾಳಿ ಹಾಗೂ ವಾಯುದಾಳಿ ನಡೆಸಿವೆ. ಇದರಿಂದಾಗಿ 5 ಉಗ್ರರು ಹತರಾಗಿ 6 ಮಂದಿ ಗಾಯಗೊಂಡಿದ್ದಾರೆ.
ಹಡಗುಗಳ ಸಂಚಾರದಲ್ಲಿ ಪ್ರಮುಖ ಮಾರ್ಗವಾಗಿರುವ ಕೆಂಪು ಸಮುದ್ರದಲ್ಲಿ ಸಂಚರಿಸುವ ಹಡಗುಗಳನ್ನು ಹೌತಿ ಉಗ್ರರು ಅಪಹರಣ ಮಾಡಿ ದಾಳಿ ನಡೆಸಿದ್ದರು. ಬುಧವಾರ ಅಮೆರಿಕದ ಮತ್ತೊಂದು ಹಡಗನ್ನು ಹೌತಿ ಉಗ್ರರು ಅಪಹರಣ ಮಾಡಿದ್ದರು. ಹೀಗಾಗಿ ಅಮೆರಿಕ ಪ್ರತೀಕಾರಕ್ಕಾಗಿ ದಾಳಿ ಮಾಡಿದೆ.ಈ ದಾಳಿಯನ್ನು ಹೌತಿ, ಹಮಾಸ್ ಉಗ್ರರು, ಲೆಬನಾನ್‌ನ ಹಿಜ್ಬುಲ್ಲಾ ತೀವ್ರವಾಗಿ ಖಂಡಿಸಿದ್ದು, ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿವೆ.