ಸಾರಾಂಶ
ಐಬಿಎಂನಲ್ಲಿ ಶೇ.30ರಷ್ಟು ನೌಕರರನ್ನು ವಜಾ ಮಾಡಿ ಅವರ ಕೆಲಸವನ್ನು ಕೃತಕ ಬುದ್ಧಿಮತ್ತೆಯ ಮೂಲಕ ಮಾಡಿಸಲು ಕಂಪನಿ ತೀರ್ಮಾನಿಸಿದೆ ಎನ್ನಲಾಗಿದೆ.
ಮುಂಬೈ: ಜಗತ್ತಿನ ಖ್ಯಾತ ಐಟಿ ಕಂಪನಿಗಳಲ್ಲಿ ಒಂದಾದ ಐಬಿಎಂ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಈ ನಿರ್ಧಾರವನ್ನು ಕೇವಲ 7 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಾರ್ಕೆಟಿಂಗ್ ಹಾಗೂ ಕಮ್ಯುನಿಕೇಷನ್ ವಿಭಾಗದಲ್ಲಿ ಉದ್ಯೋಗಿಗಳನ್ನು ಕಡಿತಗೊಳಿಸಲಿದೆ. ಆದರೆ ಎಷ್ಟು ಪ್ರಮಾಣದಲ್ಲಿ ನೌಕರರು ವಜಾ ಆಗಿದ್ದಾರೆ ಎಂಬ ಅಂಕಿ-ಅಂಶ ಬಹಿರಂಗಪಡಿಸಿಲ್ಲ.ಕೆಲವು ಆಂತರಿಕೆ ಮಾಹಿತಿಗಳ ಪ್ರಕಾರ ಕಂಪನಿಯ ಶೇ.30ರಷ್ಟು ಹುದ್ದೆಗಳನ್ನು ಕೃತಕ ಬುದ್ಧಿಮತ್ತೆ ಭರ್ತಿ ಮಾಡಲಿದೆ. ಹೀಗಾಗಿ ಈ ಸ್ಥಾನದಲ್ಲಿರುವ ಉದ್ಯೋಗಿಗಳನ್ನು ತೆಗೆದುಹಾಕಲು ಕಂಪನಿ ನಿರ್ಧರಿಸಿದೆ.ಕಳೆದ ವರ್ಷ ಐಬಿಎಂ ಸಿಇಒ ಅರವಿಂದ್ ಕೃಷ್ಣ ಹೊಸದಾಗಿ ನೇಮಕ ಮಾಡಿಕೊಳ್ಳುವುದನ್ನು ಸ್ವಲ್ಪ ಮಟ್ಟಿಗೆ ನಿಲ್ಲಿಸಲಾಗುವುದು ಎಂದು ಹೇಳಿದ್ದರು.