ಸಾರಾಂಶ
ಬುಶ್ರಾ ಬೀಬಿಗೆ ಗೃಹಬಂಧನ ವಿಧಿಸಲಾಗಿದ್ದು, ಇಮ್ರಾನ್ ಖಾನ್ ಹಾಗೂ ಖುರೇಷಿಗೆ ಜೈಲಿನಲ್ಲಿ ವಿಶೇಷ ಸವಲತ್ತುಗಳನ್ನು ನೀಡಲಾಗಿದೆ.
ಇಸ್ಲಾಮಾಬಾದ್: ವಿವಿಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿ ಜೈಲು ಸೇರಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಮಾಜಿ ವಿದೇಶಾಂಗ ಸಚಿವವ ಶಾ ಮಹಮ್ಮೂದ್ ಖುರೇಷಿ ಇದೀಗ ಜೈಲಲ್ಲಿ ಕೂಲಿಗಳ ರೀತಿಯಲ್ಲಿ ಕೆಲಸ ಮಾಡಬೇಕಿದೆ.
ಇಬ್ಬರೂ ಗಣ್ಯರಾಗಿರುವ ಕಾರಣ ಇತರೆ ಕೈದಿಗಳಂತೆ ಅಡುಗೆ ಮನೆ, ಕಾರ್ಖಾನೆ, ಕೈತೋಟದ ಕೆಲಸ ಮಾಡಬೇಕಿಲ್ಲ. ಜೈಲು ಅಧಿಕಾರಿಗಳು ಸೂಚಿಸುವ ಯಾವುದಾದರೂ ಇತರೆ ಕೆಲಸ ಮಾಡಬೇಕಿದೆ ಎಂದು ಹೇಳಲಾಗಿದೆ. ಆದರೆ ಇಬ್ಬರನ್ನು ಉಳಿದ ಕೈದಿಗಳಿಂದ ಬೇರ್ಪಡಿಸಿ ಉನ್ನತ ಸೌಕರ್ಯ ಕಲ್ಪಿಸಲಾಗಿದೆ. ಈ ಪೈಕಿ ವ್ಯಾಯಾಮ ಸಾಧನಗಳು, ಸ್ವತಃ ಅಡುಗೆ ಮಾಡಿ ಉಣ್ಣುವ ಅವಕಾಶ ನೀಡಲಾಗಿದೆ. ಇನ್ನು ಇಮ್ರಾನ್ ಪತ್ನಿ ಬುಶ್ರಾ ಬೀಬಿಯನ್ನು ಅವರ ಬಾನಿ ಗಾಲಾ ಬಂಗಲೆಯಲ್ಲಿ ಉಪ ಕಾರಾಗೃಹವಾಗಿ ಪರಿವರ್ತಿಸಿ ಗೃಹಬಂಧನದಲ್ಲಿ ಇರಿಸಲಾಗಿದೆ.