ಮುಂಡರಗಿಯಲ್ಲಿ ಗುರುವಾರ ತಹಸೀಲ್ದಾರ ಅಧ್ಯಕ್ಷತೆಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆ ಜರುಗಿತು. | Kannada Prabha
Image Credit: KP
‘ನೀವು ಗೂಗಲ್ ಕ್ರೋಮ್ ಬಳಸುತ್ತಿದ್ದೀರಾ? ಹಾಗಿದ್ದರೆ ಅದನ್ನು ಈಗಲೇ ಅಪ್ಡೇಟ್ ಮಾಡಿ. ಇಲ್ಲದಿದ್ದರೆ ನಿಮ್ಮ ಸಿಸ್ಟಂ ಮೇಲೆ ರಹಸ್ಯ ಕೋಡ್ ದಾಳಿ ನಡೆಯಬಹುದು’ ಎಂದು ಕೇಂದ್ರ ಸರ್ಕಾರಿ ಸ್ವಾಮ್ಯದ ಸಿಇಆರ್‌ಟಿ-ಇನ್ ಎಚ್ಚರಿಕೆ ನೀಡಿದೆ.
ರಹಸ್ಯ ಕೋಡ್ ದಾಳಿ ಸಾಧ್ಯತೆ ಬಗ್ಗೆ ಕೇಂದ್ರದ ಎಚ್ಚರಿಕೆ ಪಿಟಿಐ ನವದೆಹಲಿ ‘ನೀವು ಗೂಗಲ್ ಕ್ರೋಮ್ ಬಳಸುತ್ತಿದ್ದೀರಾ? ಹಾಗಿದ್ದರೆ ಅದನ್ನು ಈಗಲೇ ಅಪ್ಡೇಟ್ ಮಾಡಿ. ಇಲ್ಲದಿದ್ದರೆ ನಿಮ್ಮ ಸಿಸ್ಟಂ ಮೇಲೆ ರಹಸ್ಯ ಕೋಡ್ ದಾಳಿ ನಡೆಯಬಹುದು’ ಎಂದು ಕೇಂದ್ರ ಸರ್ಕಾರಿ ಸ್ವಾಮ್ಯದ ಸಿಇಆರ್‌ಟಿ-ಇನ್ ಎಚ್ಚರಿಕೆ ನೀಡಿದೆ. ಜನಪ್ರಿಯ ವೆಬ್ ಬ್ರೌಸರ್ ಆಗಿರುವ ಗೂಗಲ್ ಕ್ರೋಮ್ ಮೇಲೆ ಏಕಪಕ್ಷೀಯವಾದ ಅಪಾಯಕಾರಿ ಕೋಡ್ ದಾಳಿ ನಡೆಯುವ ಸಾಧ್ಯತೆಯಿದೆ. ಆಗ ನಿಮ್ಮ ಸಿಸ್ಟಂ ಸರಿಯಾಗಿ ಕೆಲಸ ಮಾಡದೆ ಹೋಗಬಹುದು. ಕೋಡ್ ದಾಳಿ ನಡೆಸುವವರು ನಿರ್ದಿಷ್ಟ ಸಿಸ್ಟಂಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಬಹುದು. ಹೀಗಾಗಿ ಗೂಗಲ್‌ನವರು ನೀಡಿರುವ ಅಪ್‌ಡೇಟ್ ರನ್ ಮಾಡಿ. ವಿಂಡೋಸ್ ಬಳಕೆದಾರರಿಗೆ 118.0.59993.70/.71ಕ್ಕಿಂತ ಹಿಂದಿನ ಸಾಫ್ಟ್‌ವೇರ್ ಹಾಗೂ ಮ್ಯಾಕ್ ಮತ್ತು ಲೈನಕ್ಸ್ ಬಳಕೆದಾರರಿಗೆ 118.0.5993.70ಕ್ಕಿಂತ ಹಿಂದಿನ ಸಾಫ್ಟ್‌ವೇರ್‌ಗಳು ಅಪಾಯದಲ್ಲಿವೆ ಎಂದು ಸಿಇಆರ್‌ಟಿ-ಇನ್ ತನ್ನ ವೆಬ್‌ಸೈಟಿನಲ್ಲಿ ಪ್ರಕಟಿಸಿದೆ.
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.