ಮಾಲ್ಡೀವ್ಸ್‌ ಪ್ರವಾಸ: 5ನೇ ಸ್ಥಾನಕ್ಕೆ ಕುಸಿದ ಭಾರತ

| Published : Jan 30 2024, 02:03 AM IST / Updated: Jan 30 2024, 08:37 AM IST

ಸಾರಾಂಶ

ಮಾಲ್ಡೀವ್ಸ್‌ಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದ ಭಾರತೀಯರ ಸಂಖ್ಯೆ ಇದೀಗ 5ನೇ ಸ್ಥಾನಕ್ಕೆ ಕುಸಿದಿದೆ.

ಮಾಲೆ: ಮಾಲ್ಡೀವ್ಸ್‌ಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದ ಭಾರತೀಯರ ಸಂಖ್ಯೆ ಇದೀಗ 5ನೇ ಸ್ಥಾನಕ್ಕೆ ಕುಸಿದಿದೆ. ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾದ ಬೆನ್ನಲ್ಲೇ ಮಾಲ್ಡೀವ್ಸ್‌ ಪ್ರವಾಸಕ್ಕೆ ತೆರಳುವುದನ್ನು ಭಾರತೀಯರು ಕಡಿಮೆ ಮಾಡಿದ್ದಾರೆ. 

ಮಾಲ್ಡೀವ್ಸ್‌ನ ಪ್ರವಾಸೋದ್ಯಮ ಸಚಿವಾಲಯದ ಪ್ರಕಾರ ಜನವರಿಯಲ್ಲಿ 13,989 ಮಂದಿ ಭಾರತೀಯರು ಮಾಲ್ಡೀವ್ಸ್‌ ಪ್ರವಾಸ ಕೈಗೊಂಡಿದ್ದಾರೆ. 

ಒಟ್ಟಾರೆ ಪ್ರವಾಸಿಗರ ಪ್ರಮಾಣದಲ್ಲಿ ಭಾರತೀಯರ ಪ್ರಮಾಣ ಶೇ.8ರಷ್ಟು ಮಾತ್ರ ಇದೆ. ರಷ್ಯಾದಿಂದ 18561, ಇಟಲಿಯಿಂದ 18111, ಚೀನಾದಿಂದ 16529 ಮತ್ತು ಬ್ರಿಟನ್‌ನಿಂದ 14588 ಮಂದಿ ಪ್ರವಾಸಿಗರು ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದಾರೆ.