ಸಾರಾಂಶ
ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಭಾರತದಿಂದ ಸ್ಪರ್ಧಿಸಿದ್ದ ‘ಟು ಕಿಲ್ ಎ ಟೈಗರ್’ ಚಿತ್ರ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ. ಈ ವಿಭಾಗದಲ್ಲಿ ಪ್ರಶಸ್ತಿ ‘20 ಡೇಸ್ ಇನ್ ಮರಿಯಾಪೋಲ್’ ಚಿತ್ರದ ಪಾಲಾಯಿತು
ನವದೆಹಲಿ: ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಭಾರತದಿಂದ ಸ್ಪರ್ಧಿಸಿದ್ದ ‘ಟು ಕಿಲ್ ಎ ಟೈಗರ್’ ಚಿತ್ರ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ. ಈ ವಿಭಾಗದಲ್ಲಿ ಪ್ರಶಸ್ತಿ ‘20 ಡೇಸ್ ಇನ್ ಮರಿಯಾಪೋಲ್’ ಚಿತ್ರದ ಪಾಲಾಯಿತು. ರಷ್ಯಾ ದಾಳಿಯ ಬಳಿಕ ಉಕ್ರೇನ್‌ನ ಮರಿಯಾಪೋಲ್‌ನಲ್ಲಿ ಸಿಕ್ಕಿಬಿದ್ದಿದ್ದ ಉಕ್ರೇನ್‌ನ ಸಿನೆಮಾ ನಿರ್ದೇಶಕ ಮತ್ತು ಪತ್ರಕರ್ತ ಮಿಸ್ಟಿಸ್‌ಲಾವ್ ಚೆರ್ನೋವ್ ಈ ಚಿತ್ರ ನಿರ್ದೇಶಿಸಿದ್ದರು.