ಮೇ10 ರೊಳಗೆ ಮಾಲ್ಡೀವ್ಸ್‌ನಿಂದ ಭಾರತೀಯ ಸೇನೆ ವಾಪಸ್‌

| Published : Feb 03 2024, 01:47 AM IST

ಸಾರಾಂಶ

ಪ್ರಸ್ತುತ ಮಾಲ್ಡೀವ್ಸ್‌ನಲ್ಲಿ 80 ಭಾರತೀಯ ಯೋಧರು ಕಾರ್ಯನಿರ್ವಹಿಸುತ್ತಿದ್ದು, ಅವರೆಲ್ಲರನ್ನೂ ಮೇ 10ರೊಳಗಾಗಿ ಹಿಂದಕ್ಕೆ ಕರೆಸಿಕೊಳ್ಳಲು ಭಾರತ ಸರ್ಕಾರ ಒಪ್ಪಿಕೊಮಡಿರುವುದಾಗಿ ಮಾಲ್ಡೀವ್ಸ್‌ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಮಾಲೆ: ಭಾರತ ಮತ್ತು ಮಾಲ್ಡೀವ್ಸ್‌ ನಡುವೆ ಸಂಘರ್ಷ ಮುಂದುವರೆದಿರುವ ನಡುವೆಯೇ, ಭಾರತ ಸರ್ಕಾರ ಮೇ10ರೊಳಗೆ ತನ್ನ ಎಲ್ಲಾ ಯೋಧರನ್ನು ಭಾರತಕ್ಕೆ ಕರೆಸಿಕೊಳ್ಳಲು ಒಪ್ಪಿರುವುದಾಗಿ ಮಾಲ್ಡೀವ್ಸ್ ವಿದೇಶಾಂಗ ಸಚಿವಾಲಯ ತಿಳಿಸಿದೆ. ಪ್ರಸ್ತುತ ಮಾಲ್ಡೀವ್ಸ್‌ನಲ್ಲಿ ಭಾರತದ 80 ಯೋಧರು 3 ತಂಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮೊದಲ ತಂಡವನ್ನು ಮಾ.10ರೊಳಗೆ ಹಿಂಪಡೆಯಲಾಗುವುದು. ಮತ್ತೆರಡು ತಂಡಗಳನ್ನು ಮೇ 10ರೊಳಗೆ ಹಿಂದಕ್ಕೆ ಕರೆಸಿಕೊಳ್ಳಲು ಭಾರತ ಸರ್ಕಾರದ ಜೊತೆಗೆ ಒಪ್ಪಂದ ಏರ್ಪಟ್ಟಿದೆ ಎಂದು ಮಾಲ್ಡೀವ್ಸ್‌ ವಿದೇಶಾಂಗ ಸಚಿವಾಲಯ ತಿಳಿಸಿದೆ. ಪ್ರಸ್ತುತ ಭಾರತೀಯ ಯೋಧರು ಮಾಲ್ಡೀವ್ಸ್‌ನಲ್ಲಿ ಎರಡು ಹೆಲಿಕಾಪ್ಟರ್‌ ಮತ್ತು ಒಂದು ವಿಮಾನ ನಿರ್ವಹಣೆಯಲ್ಲಿ ತೊಡಗಿದ್ದಾರೆ. ಅವುಗಳನ್ನು ತ್ವರಿತ ರಕ್ಷಣೆ ಮತ್ತು ಮಾನವೀಯ ಸೇವೆಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.