ಸಾರಾಂಶ
ದಕ್ಷಿಣ ಭಾರತದ ಜನಪ್ರಿಯ ಫಿಲ್ಟರ್ ಕಾಫಿ ವಿಶ್ವದಲ್ಲೇ 2ನೇ ಸ್ಥಾನನ ಪಡೆದುಕೊಂಡಿದೆ.
ನವದೆಹಲಿ: ದಕ್ಷಿಣ ಭಾರತೀಯರ ಜನಪ್ರಿಯ ಮುಂಜಾನೆ ಪೇಯವಾದ ಫಿಲ್ಟರ್ ಕಾಫಿ ಜಾಗತಿಕವಾಗಿ ಎರಡನೇ ಅತ್ಯುತ್ತಮ ಬ್ರಾಂಡ್ ಎಂಬ ಸ್ಥಾನ ಪಡೆದಿರುವುದಾಗಿ ಟೇಸ್ಟ್ ಅಟ್ಲಾಸ್ ಎಂಬ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ಪ್ರಕಟಿಸಿದೆ.
ಈ ಸಮೀಕ್ಷೆಯಲ್ಲಿ ಪ್ರಪಂಚದಾದ್ಯಂತ 38 ಕಾಫಿ ಬ್ರಾಂಡ್‌ಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ ಕ್ಯೂಬನ್ ಎಸ್ಪ್ರೆಸೋ ಬ್ರಾಂಡ್ ಅತ್ಯಂತ ರುಚಿಕರವಾಗಿರುವ ಹಿನ್ನೆಲೆಯಲ್ಲಿ ಜಾಗತಿಕವಾಗಿ ಅಗ್ರಸ್ಥಾನದಲ್ಲಿದೆ.
ಬಳಿಕ ಎರಡನೇ ಸ್ಥಾನವನ್ನು ದಕ್ಷಿಣ ಭಾರತದಲ್ಲಿ ಜನಪ್ರಿಯವಾಗಿರುವ ಫಿಲ್ಟರ್ ಕಾಫಿ ಗಿಟ್ಟಿಸಿಕೊಂಡಿದೆ. ಫಿಲ್ಟರ್ ಕಾಫಿಯು ಡಿಕಾಕ್ಷನ್ ಹಾಕಿ ಮಾಡುವ ಪದ್ಧತಿಯಿಂದಾಗಿ ಜನಪ್ರಿಯತೆ ಗಳಿಸಿಕೊಂಡಿದೆ.