ಮಾಲ್ಡೀವ್ಸ್‌ನಿಂದ ಭಾರತೀಯ ಸೇನಾ ವಾಪಸಾತಿ ಶುರು

| Published : Mar 13 2024, 02:03 AM IST

ಮಾಲ್ಡೀವ್ಸ್‌ನಿಂದ ಭಾರತೀಯ ಸೇನಾ ವಾಪಸಾತಿ ಶುರು
Share this Article
  • FB
  • TW
  • Linkdin
  • Email

ಸಾರಾಂಶ

25 ಸೈನಿಕರು ಈಗಾಗಲೇ ವಾಪಸ್‌ ಬರುವ ಪ್ರಕ್ರಿಯೆ ಆರಂಭವಾಗಿದ್ದು ಉಳಿವರು ಶೀಘ್ರ ವಾಪಸಾಗಲಿದ್ದಾರೆ ಎಂದು ಮಾಲ್ಡೀವ್ಸ್‌ ಪತ್ರಿಕೆಯೊಂದು ವರದಿ ಮಾಡಿದೆ.

ಮಾಲೆ (ಮಾಲ್ಡೀವ್ಸ್‌): ಮಾಲ್ಡೀವ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಸೇನಾಪಡೆಗಳನ್ನು ಮೇ 10ರೊಳಗೆ ಸಂಪೂರ್ಣವಾಗಿ ಹಿಂಪಡೆಯುವ ಕುರಿತು ಅಧ್ಯಕ್ಷ ಮೊಹಮ್ಮದ್‌ ಮುಯಿಜು಼ ಆದೇಶಿಸಿರುವ ಬೆನ್ನಲ್ಲೇ ಭಾರತೀಯ ಸೇನೆ ಈಗಾಗಲೇ 25 ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿರುವುದಾಗಿ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಮಾಲ್ಡೀವ್ಸ್‌ನಲ್ಲಿ ಭಾರತದ 89 ಸೈನಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ ಮಾಲ್ಡೀವ್ಸ್‌ನ ದಕ್ಷಿಣ ತುದಿಯಾದ ಅದ್ದು ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಸೇನೆಯ 25 ಯೋಧರು ಮಾ.10ರಿಂದ ನಿರ್ಗಮಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ ಎಂದು ಮಾಧ್ಯಮ ವರದಿ ಹೇಳಿದೆ,.

ಆದರೆ ಈ ಕುರಿತು ಭಾರತ ಅಥವಾ ಮಾಲ್ಡೀವ್ಸ್‌ ವತಿಯಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.ಏನು ವಿವಾದ?ಹಿಂದೂ ಮಹಾಸಾಗರದಲ್ಲಿ 1089 ದ್ವೀಪಗಳಿಂದ ಆವೃತವಾಗಿರುವ ಮಾಲ್ಡೀವ್ಸ್‌ಗೆ ಭಾರತದ ಜೊತೆಗೆ ಐತಿಹಾಸಿಕ ಸಂಬಂಧವಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆಯೇ ಮಾಲ್ಡೀವ್ಸ್‌ನಲ್ಲಿ ಸೇನೆಯನ್ನು ನಿಯೋಜಿಸಿ ಭದ್ರತೆಯನ್ನು ಒದಗಿಸುತ್ತಿತ್ತು. ಆದರೆ ಕಳೆದ ಸೆಪ್ಟೆಂಬರ್‌ನಲ್ಲಿ ಚುನಾಯಿತರಾದ ಹೊಸ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಚೀನಾ ಪರ ಒಲವು ತೋರಿ ಭಾರತೀಯ ಸೇನೆಯನ್ನು ಸಂಪೂರ್ಣವಾಗಿ ಹಿಂಪಡೆಯುವಂತೆ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಮೇ 10ರೊಳಗೆ ತನ್ನ ಪಡೆಗಳನ್ನು ಹಂತಹಂತವಾಗಿ ಹಿಂಪಡೆಯಲು ಒಪ್ಪಿಕೊಂಡಿದೆ.