ಸೋಮಾಲಿಯಾ ತೀರದಲ್ಲಿ ದಾಳಿಗೆ ತುತ್ತಾಗಿದ್ದ ಇರಾನ್‌ ಮೂಲದ ಹಡಗೊಂದನ್ನು ಭಾರತೀಯ ನೌಕಾಪಡೆ ರಕ್ಷಣೆ ಮಾಡಿದೆ.

ನವದೆಹಲಿ: ಸೋಮಾಲಿಯಾ ಪೂರ್ವ ಕಡಲ ತೀರದಲ್ಲಿ ಕಡಲ್ಗಳ್ಳರು ಹೈಜಾಕ್‌ ಮಾಡಲು ಯತ್ನಿಸಿದ್ದ ಇರಾನ್‌ ಹಡಗು ಎಫ್‌ವಿ ಆಮ್ರೈಲ್‌ನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ. ಶುಕ್ರವಾರ ಈ ಕುರಿತ ಮಾಹಿತಿ ಸಿಕ್ಕ ಬೆನ್ನಲ್ಲೇ ಭಾರತೀಯ ನೌಕಾಪಡೆ ಐಎನ್‌ಎಸ್‌ ಶಾರದಾ ಹಡಗನ್ನು ರಕ್ಷಣೆಗೆ ಕಳುಹಿಸಿ ಇರಾನ್‌ ಒಡೆತನದ ಹಡಗಿನಲ್ಲಿದ್ದ 11 ಇರಾನಿಯರು ಮತ್ತು 8 ಪಾಕಿಸ್ತಾನಿಯರನ್ನು ರಕ್ಷಿಸಿರುವುದಾಗಿ ನೌಕಾಪಡೆಯ ವಕ್ತಾರ ವಿವೇಕ್‌ ಮಧ್ವಾಲ್‌ ತಿಳಿಸಿದ್ದಾರೆ. ಇತ್ತೀಚೆಗೆ ಸಮುದ್ರದಲ್ಲಿ ಹಡಗುಗಳನ್ನು ಹೈಜಾಕ್‌ ಮಾಡುವ ಯತ್ನಗಳು ಹೆಚ್ಚಾಗಿದ್ದು, ಭಾರತೀಯ ನೌಕಾಪಡೆಯು ಹಲವಾರು ಬಾರಿ ಹಡಗಿನಲ್ಲಿದ್ದ ವಿದೇಶಿಯರನ್ನು ರಕ್ಷಿಸಿ ಕರೆ ತಂದಿದೆ.