ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿ ಸಾವು: ತಿಂಗಳಲ್ಲಿ 4ನೇ ಘಟನೆ

| Published : Feb 03 2024, 01:47 AM IST

ಸಾರಾಂಶ

ಅಮೆರಿಕದಲ್ಲಿ ವ್ಯಾಸಂಗ ಮಾಡಲು ತೆರಳಿದ್ದ ವಾಣಿಜ್ಯ ವಿದ್ಯಾರ್ಥಿ ಶ್ರೇಯಸ್‌ ರೆಡ್ಡಿ ನಿಗೂಢವಾಗಿ ಬಲಿಯಾಗಿದ್ದಾರೆ.

ನ್ಯೂಯಾರ್ಕ್‌: ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳ ನಿಗೂಢ ಸಾವಿನ ಸರಣಿ ಮುಂದುವರೆದಿದೆ. ಒಹಾಯೋ ರಾಜ್ಯದಲ್ಲಿರುವ ಸಿನ್ಸಿನಾಟಿ ನಗರದ ಲಿಂಡರ್‌ ಸ್ಕೂಲ್‌ ಆಫ್‌ ಬಿಜಿ಼ನೆಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಶ್ರೀನಿವಾಸ್‌ ರೆಡ್ಡಿ ಬೆನಿಗೇರಿ ನಿಗೂಢವಾಗಿ ಸಾವನ್ನಪ್ಪಿದ್ದಾನೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ನ್ಯೂಯಾರ್ಕ್‌ನಲ್ಲಿರುವ ಭಾರತೀಯ ಕಾನ್ಸುಲೇಟ್‌, ‘ಭಾರತೀಯ ವಿದ್ಯಾರ್ಥಿ ಶ್ರೀನಿವಾಸ್‌ ರೆಡ್ಡಿ ಅವರ ಸಾವಿನಲ್ಲಿ ಯಾವುದೇ ಶಂಕಾಸ್ಪದ ನಡೆ ಕಂಡುಬಂದಿಲ್ಲ. ಈ ಕುರಿತು ಪೊಲೀಸರು ತನಿಖೆ ಪ್ರಗತಿಯಲ್ಲಿದೆ. ಅವರ ಸಾವಿನ ಕುರಿತು ಕುಟುಂಬಕ್ಕೆ ತಿಳಿಸಲಾಗಿದ್ದು, ಭಾರತದಲ್ಲಿರುವ ವಿದ್ಯಾರ್ಥಿಯ ತಂದೆ ಶೀಘ್ರದಲ್ಲೇ ಆಗಮಿಸುವ ನಿರೀಕ್ಷೆಯಿದೆ’ ಎಂದು ತಿಳಿಸಿದ್ದಾರೆ. ಇದಕ್ಕೂ ಮೊದಲು ತಿಂಗಳ ಅವಧಿಯಲ್ಲಿ ಭಾರತೀಯ ಮೂಲದ ನೀಲ್‌ ಆಚಾರ್ಯ, ವಿವೇಕ್‌ ಸೈನಿ ಮತ್ತು ಅಕುಲ್‌ ಬಿ ಧವನ್‌ ಎಂಬ ವಿದ್ಯಾರ್ಥಿಗಳು ಅಮೆರಿಕದಲ್ಲಿ ಸಾವನ್ನಪ್ಪಿದ್ದರು.