ಸಾರಾಂಶ
ಕೆನಡಾದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಒಂದೇ ಕುಟುಂಬದ ಮೂವರ ಬಲಿಯಾಗಿದೆ.
ಒಟ್ಟಾವಾ: ಭಾರತೀಯ ಮೂಲದ ಕುಟುಂಬವೊಂದು ತಮ್ಮ ಮನೆಯಲ್ಲಿ ಸಂಭವಿಸಿದ ಅಗ್ನಿ ಅವಗಢದ ಪರಿಣಾಮ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕೆನಡಾದ ಒಂಟಾರಿಯೋ ಪ್ರಾಂತ್ಯದಲ್ಲಿ ನಡೆದಿದೆ.
ಮೃತರನ್ನು ರಾಜೀವ್ ವರಿಕೂ (51), ಅವರ ಪತ್ನಿ ಶಿಲ್ಪಾ ಕೋಥಾ (47) ಮತ್ತು ಅವರ ಪುತ್ರಿ ಮಾಹೇಕ್ ವರಿಕೂ (16) ಎಂದು ಗುರುತಿಸಲಾಗಿದೆ.
ಘಟನೆಯು ಮಾ.7ರಂದೇ ಸಂಭವಿಸಿದ್ದು, ಪೊಲೀಸರು ಬೆಂಕಿಗಾಹುತಿಯಾದ ಮನೆಯ ಅವಶೇಷಗಳನ್ನು ಪರಿಶೀಲಿಸುವ ವೇಳೆ ಮಾನವರ ಅವಶೇಷಗಳೂ ಪತ್ತೆಯಾಗಿವೆ.
ಬಳಿಕ ಅದನ್ನು ವಿದಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದಾಗ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವುದು ಖಚಿತವಾಗಿದೆ.
ಪೊಲೀಸರು ನರಹತ್ಯೆ ಎಂಬುದಾಗಿ ಪ್ರಕರಣ ದಾಖಲಿಸಿದ್ದು, ಈ ಕುರಿತು ಯಾರಿಗಾದರೂ ಮಾಹಿತಿ ಲಭ್ಯವಿದ್ದಲ್ಲಿ ಕೂಡಲೇ ಪೊಲೀಸರನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ.