ಅನಾಮಿಕ ವ್ಯಕ್ತಿಯಿಂದ ಅಮೆರಿಕದಲ್ಲಿ ಭಾರತೀಯ ಉದ್ಯಮಿ ವಿವೇಕ್‌ ಹತ್ಯೆ

| Published : Feb 11 2024, 01:46 AM IST / Updated: Feb 11 2024, 12:22 PM IST

ಅನಾಮಿಕ ವ್ಯಕ್ತಿಯಿಂದ ಅಮೆರಿಕದಲ್ಲಿ ಭಾರತೀಯ ಉದ್ಯಮಿ ವಿವೇಕ್‌ ಹತ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಅಮೆರಿಕದಲ್ಲಿ ಭಾರತೀಯ ಮೂಲದ ಉದ್ಯಮಿ ಡೈನಮೊ ಟೆಕ್ನಾಲಜೀಸ್‌ನಲ್ಲಿ ಕೆಲಸ ಮಾಡುತ್ತಿದ್ದ ವಿವೇಕ್‌ ತನೇಜಾರನ್ನು ಅನಾಮಿಕ ವ್ಯಕ್ತಿಯೊಬ್ಬ ಮಾರಣಾಂತಿಕವಾಗಿ ಥಳಿಸಿದ್ದು, ಚಿಕಿತಸೆ ಫಲಕಾರಿಯಾಗದೆ ತನೇಜಾ ಸಾವನ್ನಪ್ಪಿದ್ದಾನೆ.

ವಾಷಿಂಗ್ಟನ್‌: ಅಮೆರಿಕದಲ್ಲಿ ಭಾರತೀಯರ ಮೇಲಿನ ದೌರ್ಜನ್ಯ ಮುಂದುವರೆದಿದ್ದು, ಭಾರತೀಯ ಮೂಲದ ಟೆಕ್ಕಿಯೊಬ್ಬರು ಅನಾಮಿಕ ವ್ಯಕ್ತಿಯ ದಾಳಿಗೆ ಬಲಿಯಾಗಿದ್ದಾರೆ.

ಡೈನಮೋ ಟೆಕ್ನಾಲಜೀಸ್‌ ಸಂಸ್ಥೆಯ ಸಹಸಂಸ್ಥಾಪಕ ವಿವೇಕ್‌ ತನೇಜಾ ಮೃತ ವ್ಯಕ್ತಿ. ವಿವೇಕ್‌ ಫೆ.2ರಂದು ರಾತ್ರಿ 2 ಗಂಟೆ ಸುಮಾರಿಗೆ ನಗರದ ಉಪಾಹಾರ ಗೃಹದ ಬಳಿ ವ್ಯಕ್ತಿಯೊಬ್ಬರ ಜೊತೆ ಮಾತುಕತೆ ನಡೆಸುತ್ತಿದ್ದ ವೇಳೆ ಅದು ವಿಕೋಪಕ್ಕೆ ಹೋಗಿದೆ.

ಈ ವೇಳೆ ಎದುರಿಗಿದ್ದ ವ್ಯಕ್ತಿ ವಿವೇಕ್‌ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾಗಿಯಾಗಿದ್ದಾನೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ವಿವೇಕ್‌ ಸಾವನ್ನಪ್ಪಿದ್ದಾರೆ. ಕಳೆದ ಜನವರಿ ಬಳಿಕ 5 ವಿದ್ಯಾರ್ಥಿಗಳು ಸೇರಿ 6 ಭಾರತೀಯರ ಹತ್ಯೆ ಅಮೆರಿಕದಲ್ಲಿ ನಡೆದಿದೆ.