ಇರಾನ್‌ ಯುದ್ಧದ ವಿಚಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ನಡುವೆ ಭಿನ್ನಮತ ಸೃಷ್ಟಿಯಾಗಿದೆ. ಯುದ್ಧದ ವಿಚಾರವಾಗಿ ಉಭಯ ನಾಯಕರು ಪರಸ್ಪರ ಒಂದೂವರೆ ಗಂಟೆ ಕಾಲ ದೂರವಾಣಿ ಮೂಲಕ ಮಾತನಾಡಿದ್ದು, ಈ ವೇಳೆ ತೀವ್ರವಾಗಿ ಕಿತ್ತಾಡಿಕೊಂಡಿದ್ದಾರೆ ಎನ್ನಲಾಗಿದೆ.

ವಾಷಿಂಗ್ಟನ್‌: ಇರಾನ್‌ ಯುದ್ಧದ ವಿಚಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ನಡುವೆ ಭಿನ್ನಮತ ಸೃಷ್ಟಿಯಾಗಿದೆ. ಯುದ್ಧದ ವಿಚಾರವಾಗಿ ಉಭಯ ನಾಯಕರು ಪರಸ್ಪರ ಒಂದೂವರೆ ಗಂಟೆ ಕಾಲ ದೂರವಾಣಿ ಮೂಲಕ ಮಾತನಾಡಿದ್ದು, ಈ ವೇಳೆ ತೀವ್ರವಾಗಿ ಕಿತ್ತಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇರಾನ್‌ ಮೇಲೆ ವಾಯ ದಾಳಿ ಪುನರ್‌ ಆರಂಭಿಸಬೇಕು

‘ಇರಾನ್‌ ಮೇಲೆ ವಾಯ ದಾಳಿ ಪುನರ್‌ ಆರಂಭಿಸಬೇಕು. ಹೇರ್‌ ಇಸ್‌ ಆನ್‌ ಫೈರ್‌ (ಯುದ್ಧ ತುರ್ತು ಅಗತ್ಯ) ನೆತನ್ಯಾಹು ಆಗ್ರಹಿಸಿದರು. ಇದನ್ನು ತಳ್ಳಿಹಾಕಿದ ಟ್ರಂಪ್‌, ‘ಮೊದಲು ಸಂಧಾನ ಮಾತುಕತೆಗೆ ಅವಕಾಶ ನೀಡೋಣ’ ಎಂದರು. ಇದೇ ಉಭಯ ನಾಯಕರ ನಡುವೆ ಕಿತ್ತಾಟಕ್ಕೆ ಕಾರಣವಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಇರಾನ್‌ ಜತೆಗಿನ ಶಾಂತಿ ಮಾತುಕತೆಯ ಯಶಸ್ಸಿನ ಬಗ್ಗೆ ನೆತನ್ಯಾಹು ಅನುಮಾನ ಇದೆ. ಏಕೆಂದರೆ ಪಾಕಿಸ್ತಾನ ತನ್ನ ಸ್ವಾರ್ಥ ಸಾಧನೆಗೆ ಶಾಂತಿ ಬಯಸುತ್ತಿದೆ ಎಂಬದು ಅವರ ಅನಿಸಿಕೆ. ಈ ಹಿನ್ನೆಲೆಯಲ್ಲಿ ಯುದ್ಧ ಪುನರ್‌ ಆರಂಭಿಸಿ ಇರಾನ್‌ನ ಮಿಲಿಟರಿ, ಸೂಕ್ಷ್ಮ ಮೂಲಸೌಲಭ್ಯಗಳ ಮೇಲೆ ದಾಳಿ ನಡೆಸಲು ಉದ್ದೇಶಿಸಿದ್ದಾರೆ.

‘ಆದರೆ, ಟ್ರಂಪ್‌ ಇದಕ್ಕೂ ಮೊದಲು ಮಾತುಕತೆ ಮೂಲಕ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸೋಣ. ಒಂದು ವೇಳೆ ಮಾತುಕತೆ ವಿಫಲವಾದರೆ ಯುದ್ಧಕ್ಕೆ ಸಿದ್ಧ’ ಎಂದೂ ತಿಳಿಸಿದ್ದಾರೆಂದು ಮಾಧ್ಯಮ ವರದಿಗಳು ತಿಳಿಸಿವೆ.

ಇರಾನ್‌ ಮೇಲಿನ ದಾಳಿಯನ್ನು ಮುಂದೂಡುವ ನಿರ್ಧಾರ

ಭಾನುವಾರವಷ್ಟೇ ಟ್ರಂಪ್‌ ಅವರು ಕತಾರ್‌ ಮತ್ತು ಯುಎಇಯ ಮನವಿ ಮೇರೆಗೆ ಇರಾನ್‌ ಮೇಲಿನ ದಾಳಿಯನ್ನು ಮುಂದೂಡುವ ನಿರ್ಧಾರ ತೆಗೆದುಕೊಂಡಿದ್ದಾಗಿ ತಿಳಿಸಿದ್ದಾರೆ. ಇರಾನ್‌ ಮತ್ತು ಅಮೆರಿಕ ನಡುವೆ ಶಾಂತಿ ಸ್ಥಾಪನೆಗೆ ಕತಾರ್‌ ಮತ್ತು ಪಾಕಿಸ್ತಾನ ಸೇರಿಕೊಂಡು ಶಾಂತಿ ಒಪ್ಪಂದದ ಕರಡೊಂದನ್ನು ಸಿದ್ಧಪಡಿಸುತ್ತಿದೆ ಎಂದು ಹೇಳಲಾಗಿದೆ.