ಸಾರಾಂಶ
ನವಾಜ್ ಷರೀಫ್, ತಮ್ಮ ಸೋದರ ಶಹಬಾಜ್ ಷರೀಫ್ ಹೆಸರನ್ನು ಪ್ರಧಾನಿ ಹುದ್ದೆಗೆ ನಾಮನಿರ್ದೇಶನ ಮಾಡಿದ್ದಾರೆ.
ಇಸ್ಲಾಮಾಬಾದ್: ಪಿಪಿಪಿ ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಮಂಗಳವಾರ ಪಾಕಿಸ್ತಾನ ಪ್ರಧಾನಿ ಸ್ಪರ್ಧೆ ಯಿಂದ ಹಿಂದೆ ಸರಿದಿದ್ದು, ತಮ್ಮ ಪಕ್ಷವು ಮುಸ್ಲಿಂ ಲೀಗ್‌ನ ಮುಖ್ಯಸ್ಥ ನವಾಜ್ ಶರೀಫ್‌ಗೆ ಬೆಂಬಲ ನೀಡುತ್ತದೆ ಎಂದಿದ್ದಾರೆ.
ಇದರ ಬೆನ್ನಲ್ಲೇ ಅಚ್ಚರಿಯ ಪ್ರತಿಕ್ರಿಯೆ ನೀಡಿರುವ ನವಾಜ್ ಷರೀಫ್, ತಮ್ಮ ಸೋದರ ಶಹಬಾಜ್ ಷರೀಫ್ ಹೆಸರನ್ನು ಪ್ರಧಾನಿ ಹುದ್ದೆಗೆ ನಾಮನಿರ್ದೇಶನ ಮಾಡಿದ್ದಾರೆ.
ಶಹಬಾಜ್ ಈ ಹಿಂದೆಯೂ ಪಾಕ್ ಪ್ರಧಾನಿ ಆಗಿದ್ದರು. ನವಾಜ್ ಷರೀಫ್ ಪುತ್ರಿ ಮರ್ಯಂ ನವಾಜ್ ಅವರನ್ನು ಪಂಜಾಬ್ ಸಿಎಂ ಸ್ಥಾನಕ್ಕೆ ನಾಮನಿರ್ದೇಶನ ಮಾಡಲಾಗಿದೆ.