ಸಾರಾಂಶ
ಕೋಲ್ಕತಾ: ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂಗಳ ನರಮೇಧ ಮುಂದುವರೆದಿದ್ದು, ಇದೀಗ ರಾಜಧಾನಿ ಢಾಕಾದಿಂದ 200 ಕಿ.ಮೀ. ದೂರದ ನಟೋರ್ ಎಂಬಲ್ಲಿ ಇಸ್ಲಾಂ ಮೂಲಭೂತವಾದಿಗಳು ಅರ್ಚಕರೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಘಟನೆಯನ್ನು ಕೋಲ್ಕತಾದಲ್ಲಿನ ಇಸ್ಕಾನ್ ಸಂಘಟನೆ ತೀವ್ರವಾಗಿ ಖಂಡಿಸಿದೆ.
ಆದರೆ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ಸಾವಿರಾರು ದೌರ್ಜನ್ಯ ಪ್ರಕರಣದ ಹೊರತಾಗಿಯೂ ಈ ಕುರಿತು ಅಂತಾರಾಷ್ಟ್ರೀಯ ಸಮುದಾಯದ ಮೌನಕ್ಕೆ ಶರಣಾಗಿರುವುದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಭೀಕರ ಹತ್ಯೆ:
ನಟೋರ್ ನಗರದ ಸ್ಮಶಾನವೊಂದರ ದೇಗುಲದಲ್ಲಿ ಅರ್ಚಕರಾಗಿದ್ದ ತರುಣ್ ಚಂದ್ರದಾಸ್ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ದೇಗುಲದ ಆವರಣದಲ್ಲಿ ಕೈ ಕಾಲು ಕಟ್ಟಿದ ಸ್ಥಿತಿಯಲ್ಲಿ ದಾಸ್ ಅವರ ಶವ ಪತ್ತೆಯಾಗಿದೆ. ಜೊತೆಗೆ ದೇಗುಲದಲ್ಲಿನ ಹುಂಡಿ ಒಡೆದು ಹಣ ದೋಚಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೋಲ್ಕತಾದಲ್ಲಿನ ಇಸ್ಕಾನ್ ವಕ್ತಾರ ರಾಧಾರಮಣ್ ದಾಸ್, ‘ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಕ್ರೌರ್ಯ ಹೆಚ್ಚುತ್ತಲೇ ಇದೆ. ಆದರೆ ಮಧ್ಯಂತರ ಸರ್ಕಾರ ಸುಮ್ಮನೆ ಕುಳಿತಿದೆ. ಅರ್ಚಕ ತರುಣ್ ಚಂದ್ರದಾಸ್‌ರನ್ನು ಬರ್ಬರವಾಗಿ ಹತ್ಯೆಗೈದು, ದೇಗುಲವನ್ನು ಹಾನಿಗೊಳಿಸಿ, ಅಮೂಲ್ಯ ವಸ್ತುಗಳನ್ನು ಲೂಟಿ ಮಾಡಲಾಗಿದೆ. ಆದರೆ ಅಲ್ಲಿನ ಪೊಲೀಸರು ಮಾತ್ರ ಡಕಾಯಿತಿ ಎಂದು ಪ್ರಕರಣ ದಾಖಲಿಸಿದ್ದಾರೆ’ ಎಂದು ಆಕ್ರೋಶ ಹೊರಹಾಕಿದ್ದಾರೆ.
ನರಮೇಧ:
ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಪದಚ್ಯುತಿ ಬಳಿಕ ಆರಂಭವಾದ ಹಿಂಸಾಚಾರದಲ್ಲಿ ಅವಾಮಿ ಲೀಗ್ ಪಕ್ಷದ ನಾಯಕರು, ಹಿಂದೂಗಳು ಸೇರಿದಂತೆ 600ಕ್ಕೂ ಹೆಚ್ಚು ಜನರನ್ನು ಹತ್ಯೆಗೈಯಲಾಗಿದೆ. ಜೊತೆಗೆ ಹಿಂದೂಗಳ ಮೇಲೆ ದಾಳಿಯ 2000ಕ್ಕೂ ಹೆಚ್ಚು ಘಟನೆಗಳು ನಡೆದಿದ್ದು, 50ಕ್ಕೂ ಹೆಚ್ಚು ದೇಗುಲಗಳನ್ನು ಧ್ವಂಸ ಮಾಡಲಾಗಿದೆ.
- ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ- ಮತಾಂಧರಿಂದ ದೇವಸ್ಥಾನದ ಹುಂಡಿ ಲೂಟಿ- ಅಂ.ರಾ. ಸಮುದಾಯದ ಮೌನಕ್ಕೆ ಆಕ್ರೋಶ
- ಬಾಂಗ್ಲಾ ರಾಜಧಾನಿ ಢಾಕಾದಿಂದ 200 ಕಿ.ಮೀ. ದೂರದ ನಟೋರ್‌ನಲ್ಲಿ ಕೃತ್ಯ
- ಸ್ಮಶಾನವೊಂದರಲ್ಲಿರುವ ಹಿಂದೂ ದೇಗುಲದ ಅರ್ಚಕರಾಗಿದ್ದ ತರುಣ್ ಕೊಲೆ- ಅರ್ಚಕನ ಹತ್ಯೆ ಬಳಿಕ ದೇಗುಲ ಹುಂಡಿ ಒಡೆದು ಹಣ ದೋಚಿರುವ ದುರುಳರು
- ಶೇಖ್ ಹಸೀನಾ ಪದಚ್ಯುತಿ ಬಳಿಕ ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ
- ಅವಾಮಿ ಲೀಗ್ ನಾಯಕರು, ಹಿಂದೂಗಳು ಸೇರಿ 600ಕ್ಕೂ ಹೆಚ್ಚು ಜನರ ಕೊಲೆ
- ಹಿಂದೂಗಳ ಮೇಲೆ 200ಕ್ಕೂ ಹೆಚ್ಚು ದಾಳಿ. 50ಕ್ಕೂ ಅಧಿಕ ದೇಗುಲ ಧ್ವಂಸ
- ಇದರ ವಿರುದ್ಧ ಪ್ರತಿಭಟನೆ ನಡೆಸಿದ ಕಾರಣಕ್ಕೆ ಇಸ್ಕಾನ್ ಸನ್ಯಾಸಿ ಬಂಧನ
ಬಾಂಗ್ಲಾ ಹಿಂದೂಗಳಮೇಲೆ ಕ್ರೌರ್ಯ ಹೆಚ್ಚಳ
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಕ್ರೌರ್ಯ ಹೆಚ್ಚುತ್ತಲೇ ಇದೆ. ಆದರೆ ಮಧ್ಯಂತರ ಸರ್ಕಾರ ಸುಮ್ಮನೆ ಕುಳಿತಿದೆ. ಅರ್ಚಕ ತರುಣ್ ಚಂದ್ರದಾಸ್‌ರನ್ನು ಬರ್ಬರವಾಗಿ ಹತ್ಯೆಗೈದು, ದೇಗುಲವನ್ನು ಹಾನಿಗೊಳಿಸಿ, ಅಮೂಲ್ಯ ವಸ್ತುಗಳನ್ನು ಲೂಟಿ ಮಾಡಲಾಗಿದೆ. ಆದರೆ ಅಲ್ಲಿನ ಪೊಲೀಸರು ಮಾತ್ರ ಡಕಾಯಿತಿ ಪ್ರಕರಣ ದಾಖಲಿಸಿದ್ದಾರೆ.
- ಕೋಲ್ಕತಾ ಇಸ್ಕಾನ್
;Resize=(690,390))
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))