ಸಾರಾಂಶ
ಜೆರುಸಲೇಂ: ಗಾಜಾ಼ದಲ್ಲಿ ನಾಗರಿಕರನ್ನು ಹತ್ಯೆಗೈಯ್ಯುವ ಮೂಲಕ ಅಂತಾರಾಷ್ಟ್ರೀಯ ಸಮುದಾಯದಿಂದ ಕಟುಟೀಕೆಗೆ ಗುರಿಯಾಗಿದ್ದ ಇಸ್ರೇಲ್ ಸೇನೆ ಇದೀಗ ತನ್ನ ಸೇನಾಪಡೆಗಳನ್ನು ಕ್ರಮೇಣ ಹಿಂಪಡೆಯಲು ಆರಂಭಿಸಿದೆ. ಹೀಗಾಗಿ ಇನ್ನು ಜನವಸತಿ ಪ್ರದೇಶಗಳ ಬದಲು ಉಗ್ರರ ಅಡಗುತಾಣಗಳ ಮೇಲಷ್ಟೇ ಇಸ್ರೇಲ್ ಗಮನ ಕೇಂದ್ರೀಕರಿಸುವ ಸಾಧ್ಯತೆ ಇದೆ.ಈ ಕುರಿತು ಮಾಹಿತಿ ನೀಡಿದ ಸೇನಾ ವಕ್ತಾರ ಡೇನಿಯಲ್ ಹಗಾರಿ, ‘ಉತ್ತರ ಗಾಜಾ಼ದಲ್ಲಿ ಬಹುತೇಕ ಭಾಗವನ್ನು ನಾವು ವಶಕ್ಕೆ ಪಡೆದಿದ್ದು, ಅಲ್ಲಿಂದ ನಮ್ಮ ಸೇನಾ ಪಡೆಗಳನ್ನು ಹಿಂಪಡೆಯಲು ನಿರ್ಧರಿಸಿದ್ದೇವೆ. ಇದರ ಭಾಗವಾಗಿ ಮೊದಲ ಹಂತದಲ್ಲಿ 5 ಬ್ರಿಗೇಡ್‌ಗಳಲ್ಲಿರುವ ಸಾವಿರಕ್ಕೂ ಅಧಿಕ ಟ್ರೂಪ್‌ಗಳನ್ನು ಹಿಂಪಡೆಯಲಾಗುವುದು. ಇದರಲ್ಲಿ ಬಹುತೇಕ ಮೀಸಲು ಪಡೆ ಯೋಧರಿದ್ದು’ ಎಂದರು.
ಅಮಾಯಕ ಜನರನ್ನು ಸಾಯಿಸುವ ಬದಲು ಉಗ್ರರ ಅಡಗುತಾಣಗಳ ಮೇಲಷ್ಟೇ ದಾಳಿ ನಡೆಸಿ ಎಂದು ಇತ್ತೀಚೆಗೆ ಅಮೆರಿಕ ಸೇರಿ ಅನೇಕ ದೇಶಗಳು ಇಸ್ರೇಲ್ ಸರ್ಕಾರವನ್ನು ಆಗ್ರಹಿಸಿದ್ದವು.‘ಇಸ್ರೇಲ್ ಆರ್ಥಿಕ ಸ್ಥಿತಿ ಕೊಂಚ ಹದಗೆಡುತ್ತಿರುವುದರಿಂದ ಅವರು ತಮ್ಮ ಎಂದಿನ ಕೆಲಸದಲ್ಲಿ ತೊಡಗಿಕೊಳ್ಳಲಿದ್ದಾರೆ’ ಎಂದೂ ಅವರು ಸ್ಪಷ್ಟಪಡಿಸಿದರು. ಈ ಮೂಲಕ ಇಸ್ರೇಲ್ ಕೇವಲ ಉಗ್ರರ ತಾಣಗಳನ್ನು ಮಾತ್ರ ಗುರಿಯಾಗಿಸಿಕೊಂಡು ದಾಳಿ ನಡೆಸಲು ಸಜ್ಜಾಗಿದೆ ಎನ್ನಲಾಗಿದೆ.
ಈ ನಡುವೆ ಭಾನುವಾರ ಗಾಜಾ಼ ಪಟ್ಟಿಯಲ್ಲಿ 156 ಜನರ ಹತ್ಯೆ ಆಗಿರುವುದಾಗಿ ಆರೋಗ್ಯ ಸಚಿವಾಲಯ ಘೋಷಿಸಿದೆ.ದ.ಕೊರಿಯಾ ಪ್ರತಿಪಕ್ಷ ನಾಯಕ ಲೀ ಕತ್ತು ಕೊಯ್ದು ಹತ್ಯೆ ಯತ್ನಸಿಯೋಲ್ (ದ.ಕೊರಿಯಾ): ದಕ್ಷಿಣ ಕೊರಿಯಾದ ಪ್ರತಿಪಕ್ಷ ನಾಯಕ ಲೀ-ಜೆ-ಮ್ಯಂಗ್ ಅವರ ಹತ್ಯೆ ಯತ್ನ ನಡೆದಿದ್ದು, ಅನಾಮಿಕ ವ್ಯಕ್ತಿಯೊಬ್ಬ ಚಾಕುವಿನಿಂದ ಲೀ ಅವರ ಕತ್ತುಕೊಯ್ದ ಘಟನೆ ನಗರದಲ್ಲಿ ನಡೆದಿದೆ.
ಬಸಾನ್ ನಗರದಲ್ಲಿ ಮ್ಯಂಗ್ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದಾಗ ಆಟೋಗ್ರಾಫ್ ಹಾಕಿಸಿಕೊಳ್ಳುವ ನೆಪದಲ್ಲಿ ಬಂದ ವ್ಯಕ್ತಿ ಎಡಭಾಗದಿಂದ 18 ಸೆಂ.ಮೀ. ಉದ್ದದ ಚಾಕುವಿನಿಂದ ಲೀ ಅವರ ಕತ್ತು ಸೀಳಿ ಪರಾರಿಯಾಗಿದ್ದಾನೆ. ಆತನನ್ನು ಮಫ್ತಿಯಲ್ಲಿದ್ದ ಪೊಲೀಸರು ಬಂಧಿಸಿದ್ದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.ಇತ್ತ ಲೀ ಅವರಿಗೆ ನಗರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಸಿಯೋಲ್ ನಗರಕ್ಕೆ ಸ್ಥಳಾಂತರಿಸಲಾಗಿದೆ.2022ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಕೇವಲ ಶೇ.0.7 ಮತಪ್ರಮಾಣದಿಂದ ಸೋತ ನಂತರ ಆಡಳಿತ ಪಕ್ಷವನ್ನು ಹಲವು ವಿಷಯಗಳಲ್ಲಿ ಲೀ ಅವರು ಕಟುವಾಗಿ ಟೀಕಿಸಿ ಗಮನ ಸೆಳೆದಿದ್ದಾರೆ.ಜಪಾನ್‌ನಲ್ಲಿ ಸಿಲುಕಿದ್ದ ಜ್ಯೂ.ಎನ್‌ಟಿಆರ್ ತವರಿಗೆ ಸುರಕ್ಷಿತವಾಗಿ ವಾಪಸ್
ಹೈದರಾಬಾದ್: ಭೂಕಂಪ ಪೀಡಿತ ಜಪಾನ್‌ನಲ್ಲಿ 1 ವಾರದಿಂದ ಪ್ರವಾಸದಲ್ಲಿದ್ದ ಆರ್‌ಆರ್‌ಆರ್ ಖ್ಯಾತಿಯ ಜ್ಯೂ.ಎನ್‌ಟಿಆರ್ ಸುರಕ್ಷಿತವಾಗಿ ಭಾರತಕ್ಕೆ ಮರಳಿ ಬಂದಿದ್ದಾರೆ.ಈ ಕುರಿತು ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ‘ಜಪಾನ್‌ನಲ್ಲಿ ಭೂಕಂಪದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ನಾನು ಸುರಕ್ಷಿತವಾಗಿ ಭಾರತಕ್ಕೆ ಮರಳಿ ಬಂದಿದ್ದು, ನನ್ನ ಮನಸ್ಸು ಸದಾ ಅಲ್ಲಿ ತೊಂದರೆಗೆ ಒಳಗಾದವರ ಕುರಿತು ಚಿಂತಿಸುತ್ತಿದೆ. ಜಪಾನ್ ಜನತೆ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಆಶಿಸುತ್ತೇನೆ’ ಎಂದು ತಿಳಿಸಿದ್ದಾರೆ.ಈ ನಡುವೆ ಆರ್‌ಆರ್‌ಆರ್ ಚಿತ್ರದ ನಿರ್ದೇಶಕ ರಾಜಮೌಳಿ ಸಹ ಜಪಾನ್‌ನಲ್ಲಿ ತೊಂದರೆಗೊಳಗಾದವರಿಗೆ ಸಾಂತ್ವನ ಹೇಳಿ ಟ್ವೀಟ್ ಮಾಡಿದ್ದಾರೆ.