ಮಕ್ಕಳನ್ನು ಬಚ್ಚಿಟ್ಟು ಹಮಾಸ್‌ ದಾಳಿಗೆ ಬಲಿಯಾದ ದಂಪತಿ

| Published : Oct 13 2023, 12:15 AM IST

ಸಾರಾಂಶ

ಹಮಾಸ್‌ ಉಗ್ರರು ದಾಳಿ ನಡೆಸುವ ಮುನ್ನ 10 ತಿಂಗಳ ಅವಳಿ ಮಕ್ಕಳನ್ನು ಬಚ್ಚಿಟ್ಟು ಅವರನ್ನು ಇಸ್ರೇಲಿನ ದಂಪತಿ ರಕ್ಷಿಸಿದ ಘಟನೆ ಇಸ್ರೇಲಲ್ಲಿ ನಡೆದಿದೆ. ಆದರೆ ಈ ದಾಳಿಯಲ್ಲಿ ದಂಪತಿ ಅಸುನೀಗಿದ್ದು, ಮಕ್ಕಳನ್ನು 12 ಗಂಟೆಗಳ ಬಳಿಕ ಭದ್ರತಾ ಪಡೆಗಳು ರಕ್ಷಿಸಿವೆ.
ಯುದ್ಧಪೀಡಿತ ಸಿರಿಯಾದಲ್ಲಿ ಹೃದಯವಿದ್ರಾವಕ ಘಟನೆ ಟೆಲ್‌ ಅವಿವ್‌: ಹಮಾಸ್‌ ಉಗ್ರರು ದಾಳಿ ನಡೆಸುವ ಮುನ್ನ 10 ತಿಂಗಳ ಅವಳಿ ಮಕ್ಕಳನ್ನು ಬಚ್ಚಿಟ್ಟು ಅವರನ್ನು ಇಸ್ರೇಲಿನ ದಂಪತಿ ರಕ್ಷಿಸಿದ ಘಟನೆ ಇಸ್ರೇಲಲ್ಲಿ ನಡೆದಿದೆ. ಆದರೆ ಈ ದಾಳಿಯಲ್ಲಿ ದಂಪತಿ ಅಸುನೀಗಿದ್ದು, ಮಕ್ಕಳನ್ನು 12 ಗಂಟೆಗಳ ಬಳಿಕ ಭದ್ರತಾ ಪಡೆಗಳು ರಕ್ಷಿಸಿವೆ. ಹಮಾಸ್‌ ಉಗ್ರರು ಇಸ್ರೇಲ್‌ ಪ್ರವೇಶಿಸಿದ ಬಳಿಕ ಮನೆ ಮನೆಗೆ ನುಗ್ಗಿ ನಾಗರಿಕರನ್ನು ಹತ್ಯೆ ಮಾಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ತಮ್ಮ ಮನೆಯ ಮೇಲೆ ದಾಳಿಯಾಗುವ ಮೊದಲು ಇಟಾಯ್‌ ಮತ್ತು ಹದಾರ್‌ ಬೆರ್ಡಿಚೆಸ್ಕಿ ಎಂಬ ದಂಪತಿ ತಮ್ಮ 10 ತಿಂಗಳ ಅವಳಿ ಮಕ್ಕಳನ್ನು ಮನೆಯಲ್ಲಿ ಬಚ್ಚಿಟ್ಟಿದ್ದಾರೆ. ಆದರೆ ದುರದೃಷ್ಟವಶಾತ್‌ ಉಗ್ರರು ನಡೆಸಿದ ದಾಳಿಯಲ್ಲಿ ಈ ಇಬ್ಬರು ಮೃತಪಟ್ಟಿದ್ದಾರೆ. ಉಗ್ರರನ್ನು ಹಿಮ್ಮೆಟ್ಟಿಸಿದ ಬಳಿಕ ರಕ್ಷಣಾ ಕರ್ಯಾಚರಣೆಯ ವೇಳೆ 12 ಗಂಟೆಗಳ ಬಳಿಕ ಈ ಮಕ್ಕಳನ್ನು ಸೈನಿಕರು ರಕ್ಷಿಸಿದ್ದು, ಮಕ್ಕಳಿಬ್ಬರು ಸುರಕ್ಷಿತವಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಶನಿವಾರ ಹಮಾಸ್‌ ಉಗ್ರರು ದಾಳಿ ನಡೆಸಬಹುದೆಂಬ ಸೂಚನೆಯೂ ಇಲ್ಲದ ಜನ ದೈನಂದಿನ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಈ ವೇಳೆ ಹಠಾತ್‌ ದಾಳಿ ನಡೆಸಿದ ಉಗ್ರರು ಮಾರಣಹೋಮ ನಡೆಸಿದ್ದಾರೆ.