ಡೀಪ್‌ಫೇಕ್‌ ತಂತ್ರಜ್ಞಾನ ಬಳಸಿ ಇಟಲಿ ಪ್ರಧಾನಿ ಸೆಕ್ಸ್‌ ವಿಡಿಯೋ

| Published : Mar 22 2024, 01:03 AM IST / Updated: Mar 22 2024, 12:56 PM IST

ಸಾರಾಂಶ

ಡೀಪ್‌ಫೇಕ್‌ ತಂತ್ರಜ್ಞಾನ ಬಳಸಿ ಖ್ಯಾತನಾಮನ ಹೆಸರಿಗೆ ಕಳಂಕ ಬಳಿಯುವ ಯತ್ನಗಳು ಮುಂದುವರೆದಿದ್ದು, ಇದೀಗ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಇದಕ್ಕೆ ತುತ್ತಾಗಿದ್ದಾರೆ

ಮಿಲಾನ್‌: ಡೀಪ್‌ಫೇಕ್‌ ತಂತ್ರಜ್ಞಾನ ಬಳಸಿ ಖ್ಯಾತನಾಮನ ಹೆಸರಿಗೆ ಕಳಂಕ ಬಳಿಯುವ ಯತ್ನಗಳು ಮುಂದುವರೆದಿದ್ದು, ಇದೀಗ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಇದಕ್ಕೆ ತುತ್ತಾಗಿದ್ದಾರೆ. 

ಇಟಲಿ ಇಬ್ಬರು ವ್ಯಕ್ತಿಗಳು ಸೆಕ್ಸ್‌ ವಿಡಿಯೋವೊಂದಕ್ಕೆ ಮೆಲೋನಿ ಮುಖ ಸೇರಿಸಿ ಆನ್‌ಲೈನ್‌ನಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದರು. ಅಮೆರಿಕದಲ್ಲಿ ಅಪ್‌ಲೋಡ್‌ ಮಾಡಲಾಗಿದ್ದ ಈ ವಿಡಯೋ ಕೆಲವೇ ತಿಂಗಳಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಕಂಡಿತ್ತು. 

ಮೆಲೋನಿ ಪ್ರಧಾನಿಯಾಗುವುದಕ್ಕೂ ಮುನ್ನ ನಡೆದ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಈ ಕುರಿತು ಪೊಲೀಸರು ದುಷ್ಕೃತ ಎಸಗಿದ ಅಪ್ಪ-ಮಗನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 

ಈ ಪ್ರಕರಣದಲ್ಲಿ ಮೆಲೋನಿ 85 ಲಕ್ಷ ರು. ಪರಿಹಾರ ಕೋರಿ ಕೇಸು ದಾಖಲಿಸಿದ್ದಾರೆ. ಆದರೆ ಈ ಹಣವನ್ನು ಕೇವಲ ಸಾಂಕೇತಿಕವಾಗಿ ಕೇಳಲಾಗಿದೆ. ಇದು ಮಹಿಳೆಯರನ್ನು ಅನಾವಶ್ಯವಾಗಿ ಕೆಟ್ಟ ಕೆಲಸಕ್ಕೆ ಬಳಸಿಕೊಳ್ಳುವವರಿಗೆ ಎಚ್ಚರಿಕೆ ಸಂದೇಶವಾಗಲಿದೆ. 

ಪರಿಹಾರದ ರೂಪದಲ್ಲಿ ಸಿಗುವ ಪೂರ್ಣ ಹಣವನ್ನು ಪುರುಷರಿಂದ ಹಿಂಸೆಗೆ ಒಳಗಾದ ಮಹಿಳೆಯರ ಕಲ್ಯಾಣಕ್ಕೆ ಬಳಸುವುದಾಗಿ ಮೆಲೋನಿ ಪರ ವಕೀಲರು ಮಾಹಿತಿ ನೀಡಿದ್ದಾರೆ.

ಭಾರತದಲ್ಲೂ ಇತ್ತೀಚೆಗೆ ಹಲವು ಖ್ಯಾತನಾಮ ನಟಿಯರ ಫೋಟೋ, ವಿಡಿಯೋಗಳನ್ನು ಹೀಗೆ ಡೀಪ್‌ಫೇಕ್‌ ತಂತ್ರಜ್ಞಾನ ಬಳಸಿಕೊಂಡು ಅಶ್ಲೀಲವಾಗಿ ಚಿತ್ರಿಸಲಾಗಿತ್ತು.