ಜಪಾನ್‌ ಮಾಜಿ ಪ್ರಧಾನಿ ದಿ.ಶಿಂಜೋ ಅಬೆ ಪತ್ನಿಗೆ ಮೋದಿ ಪತ್ರ ಹಸ್ತಾಂತರ

| Published : Mar 09 2024, 01:32 AM IST

ಜಪಾನ್‌ ಮಾಜಿ ಪ್ರಧಾನಿ ದಿ.ಶಿಂಜೋ ಅಬೆ ಪತ್ನಿಗೆ ಮೋದಿ ಪತ್ರ ಹಸ್ತಾಂತರ
Share this Article
  • FB
  • TW
  • Linkdin
  • Email

ಸಾರಾಂಶ

ಜಪಾನ್‌ನ ಮಾಜಿ ಪ್ರಧಾನಿ ದಿವಂಗತ ಶಿಂಜೋ ಅಬೆ ಅವರ ಪತ್ನಿ ಅಕಿ ಅಬೆ ಅವರನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಶುಕ್ರವಾರ ಭೇಟಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ವೈಯಕ್ತಿಕ ಪತ್ರ ಹಸ್ತಾಂತರಿಸಿದರು.

ಟೋಕಿಯೊ: ಜಪಾನ್‌ನ ಮಾಜಿ ಪ್ರಧಾನಿ ದಿವಂಗತ ಶಿಂಜೋ ಅಬೆ ಅವರ ಪತ್ನಿ ಅಕಿ ಅಬೆ ಅವರನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಶುಕ್ರವಾರ ಭೇಟಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ವೈಯಕ್ತಿಕ ಪತ್ರ ಹಸ್ತಾಂತರಿಸಿದರು. ಈ ವೇಳೆ ಶಿಂಜೊ ಅಬೆ ಅವರ ಜೊತೆಗಿನ ಒಡನಾಟ ಸ್ಮರಿಸಿದರು. ಜಪಾನ್‌ನ ನಾರಾದಲ್ಲಿ 2022ರ ಜುಲೈ 8 ರಂದು ಚುನಾವಣಾ ಪ್ರಚಾರ ನಡೆಸುವ ವೇಳೆ ಆಗುಂತಕನ ಗುಂಡಿಗೆ ಶಿಂಜೊ ಬಲಿಯಾಗಿದ್ದರು. ಶಿಂಜೋ ಅವರ ಜೊತೆ ಪ್ರಧಾನಿ ಮೋದಿ ಅತ್ಯಾಪ್ತ ಸಂಬಂಧ ಹೊಂದಿದ್ದರು.