ಸಾರಾಂಶ
ಜಪಾನ್ ಚಂದ್ರನಲ್ಲಿ ಇಳಿಯುವಾಗ ವಿರುದ್ಧ ದಿಕ್ಕಿನಲ್ಲಿ ತಲೆಕೆಳಗಾಗಿ ಬಿದ್ದಿದೆ.
ಟೋಕಿಯೋ: ಜಪಾನ್‌ನ ಮಹತ್ವಾಕಾಂಕ್ಷಿ ಮೂನ್ ಲ್ಯಾಂಡಿಂಗ್ ಯೋಜನೆಯ ಲ್ಯಾಂಡರ್ ಚಂದ್ರನ ನೆಲದ ಮೇಲಿರುವ ಸಣ್ಣ ಗುಡ್ಡಕ್ಕೆ ಅಪ್ಪಳಿಸಿ ತಲೆಕೆಳಗಾಗಿ ಬಿದ್ದಿದೆ ಎಂದು ಜಪಾನ್ ಬುಧವಾರ ಹೇಳಿದೆ.
ಇದು ಜಗತ್ತಿನ ಅತಿ ಚಿಕ್ಕ ಲ್ಯಾಂಡರ್ ಆಗಿದ್ದು, ಚಂದ್ರನ ಮೇಲೆ ಇಳಿಯಲು 50 ಮೀ. ಇದ್ದಾಗ ಲ್ಯಾಂಡರ್‌ನಲ್ಲಿದ್ದ ಎಂಜಿನ್‌ವೊಂದು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ನಿಗದಿ ಪಡಿಸಿದ್ದ ಜಾಗಕ್ಕಿಂತ 55 ಮೀ. ದೂರದಲ್ಲಿ ಲ್ಯಾಂಡ್ ಆಗಿದೆ.
ಲ್ಯಾಂಡ್ ಆದ ಪ್ರದೇಶದಲ್ಲಿ ದೊಡ್ಡ ದೊಡ್ಡ ಗುಂಡಿಗಳಿರುವ ಕಾರಣ ಲ್ಯಾಂಡರ್ ತಲೆಕೆಳಗಾಗಿ ಬಿದ್ದಿದೆ.
ಹೀಗಾಗಿ ಇದರಲ್ಲಿರುವ ಸೌರ ಫಲಕಗಳು ಸೂರ್ಯನ ಬೆಳಕನ್ನು ಪಡೆದುಕೊಳ್ಳದೇ ಚಾರ್ಜ್ ಆಗಿಲ್ಲ.
ಮುಂದಿನ ದಿನಗಳಲ್ಲಿ ಇದು ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ಜಪಾನ್ ತಿಳಿಸಿದೆ. ಈ ಲ್ಯಾಂಡಿಂಗ್ ಬಳಿಕ ಚಂದ್ರನ ಮೇಲೆ ಲ್ಯಾಂಡರ್ ಇಳಿಸಿದ 5ನೇ ದೇಶ ಎಂಬ ಕೀರ್ತಿಗೆ ಜಪಾನ್ ಪಾತ್ರವಾಗಿದೆ.