ಬೈಡೆನ್ ಅಧ್ಯಕ್ಷ ಆಗುವಷ್ಟು ಆರೋಗ್ಯವಂತ: ವೈದ್ಯಕೀಯ ವರದಿ

| Published : Mar 01 2024, 02:15 AM IST

ಬೈಡೆನ್ ಅಧ್ಯಕ್ಷ ಆಗುವಷ್ಟು ಆರೋಗ್ಯವಂತ: ವೈದ್ಯಕೀಯ ವರದಿ
Share this Article
  • FB
  • TW
  • Linkdin
  • Email

ಸಾರಾಂಶ

ಅಮೆರಿಕದ ಅಧ್ಯಕ್ಷರಾಗಿರುವ ಜೋ ಬೈಡೆನ್‌ ಅವರ ವಾರ್ಷಿಕ ಆರೋಗ್ಯ ತಪಾಸಣೆ ವರದಿ ಬಿಡುಗಡೆಯಾಗಿದ್ದು, ಅವರು ಆಡಳಿತಾತ್ಮಕ ಕೆಲಸಗಳನ್ನು ಮಾಡುವಷ್ಟು ಶಕ್ತರಾಗಿದ್ದಾರೆ ಎಂದು ಉಲ್ಲೇಖಿಸಿದೆ.

ಬೆಥೆಸ್ಡಾ (ಅಮೆರಿಕ): ಮರೆವಿನ ಖಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ವದಂತಿಗಳ ನಡುವೆಯೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ತಮ್ಮ ಆಡಳಿತಾತ್ಮಕ ಕೆಲಸ ಮಾಡಲು ಸಂಪೂರ್ಣ ಆರೋಗ್ಯವಂತರಾಗಿದ್ದಾರೆ ಎಂದು ವಾರ್ಷಿಕ ವೈದ್ಯಕೀಯ ತಪಾಸಣಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಮೆರಿಕದ ಅತ್ಯಂತ ಹಿರಿಯ ವಯಸ್ಸಿನ (81) ಅಧ್ಯಕ್ಷರಾಗಿರುವ ಬೈಡೆನ್‌ ಅವರನ್ನು ಸುಮಾರು ಎರಡೂವರೆ ಗಂಟೆಗಳ ಕಾಲ ಡಾ. ಕೆವಿನ್‌ ಒ ಕೊನೊರ್‌ ನೇತೃತ್ವದಲ್ಲಿ ತಪಾಸಣೆ ಮಾಡಲಾಯಿತು. ಬೈಡೆನ್‌ ಆಡಳಿತಾತ್ಮಕ ಕೆಲಸ ಮಾಡುವಷ್ಟು ಶಕ್ತರಾಗಿದ್ದಾರೆ. ಅಲ್ಲದೆ ಅವರು ವಾರಕ್ಕೆ ಐದು ಬಾರಿ ವ್ಯಾಯಾಮ ಮಾಡುತ್ತಿದ್ದು, ಗಮನಾರ್ಹ ಸಮಸ್ಯೆಗಳಿಲ್ಲ ಎಂದು ವರದಿ ಹೇಳಿದೆ.