ಸಾರಾಂಶ
ಭಾರತೀಯರ ಹತ್ಯೆ ಕುರಿತು ಗಂಭೀರ ತನಿಖೆ ನಡೆಸುತ್ತಿರುವುದಾಗಿ ಶ್ವೇತಭವನದ ವಕ್ತಾರ ಜಾನ್ ಕಿರ್ಬಿ ತಿಳಿಸಿದ್ದಾರೆ.
ವಾಷಿಂಗ್ಟನ್: ಅಮೆರಿಕದಲ್ಲಿ 2 ತಿಂಗಳಲ್ಲಿ 6ಕ್ಕೂ ಅಧಿಕ ಭಾರತೀಯರ ಹತ್ಯೆ ಆಗಿರುವ ಬಗ್ಗೆ ಅಮೆರಿಕ ಸರ್ಕಾರ ಮೌನ ಮುರಿದಿದೆ.
ದಾಳಿಗಳನ್ನು ತಡೆಗಟ್ಟಲು ಜೋ ಬೈಡೆನ್ ಸರ್ಕಾರವು ಶತಪ್ರಯತ್ನ ಮಾಡುತ್ತಿರುವುದಾಗಿ ಶ್ವೇತಭವನ ವಕ್ತಾರ ಜಾನ್ ಕಿರ್ಬಿ ತಿಳಿಸಿದ್ದಾರೆ. ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಅಮೆರಿಕದಲ್ಲಿ ಹಿಂಸಾ ಪ್ರವೃತ್ತಿಗೆ ಶೂನ್ಯ ಸಹಿಷ್ಣುತೆಯನ್ನು ಅನುಸರಿಸಲಾಗುತ್ತದೆ.ಹತ್ಯೆಯಾದವರು ಯಾವುದೇ ಪಂಗಡ, ಲಿಂಗ, ಜನಾಂಗಕ್ಕೆ ಸೇರಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸಿ ಹತ್ಯೆಗೆ ಕಾರಣವಾದವರನ್ನು ಪತ್ತೆ ಹಚ್ಚುವುದರ ಜೊತೆಗೆ ಮುಂದೆ ಇಂತಹ ಕೊಲೆಗಳು ನಡೆಯದಂತೆ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ’ ಎಂದರು.