ಅಮೆರಿಕ : ಡೆಮಾಕ್ರೆಟ್‌ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್‌ ಆಯ್ಕೆ ಬಹುತೇಕ ಖಚಿತ

| Published : Jul 24 2024, 12:21 AM IST / Updated: Jul 24 2024, 04:13 AM IST

kamala haris

ಸಾರಾಂಶ

ಅಮೆರಿಕದ ಹಾಲಿ ಉಪಾಧ್ಯಕ್ಷೆ, ಭಾರತೀಯ ಮೂಲದ ಕಮಲಾ ಹ್ಯಾರಿಸ್‌, ಮುಂಬರುವ ಚುನಾವಣೆಯಲ್ಲಿ ಡೆಮಾಕ್ರೆಟ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ವಾಷಿಂಗ್ಟನ್‌: ಅಮೆರಿಕದ ಹಾಲಿ ಉಪಾಧ್ಯಕ್ಷೆ, ಭಾರತೀಯ ಮೂಲದ ಕಮಲಾ ಹ್ಯಾರಿಸ್‌, ಮುಂಬರುವ ಚುನಾವಣೆಯಲ್ಲಿ ಡೆಮಾಕ್ರೆಟ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಕಮಲಾ ಸೂಕ್ತ ಅಭ್ಯರ್ಥಿ ಎಂದು, ಕಣದಿಂದ ಹಿಂದಕ್ಕೆ ಸರಿದ ಬೈಡೆನ್‌ ಮೊದಲಿಗೆ ಘೋಷಣೆ ಮಾಡಿದ್ದರು. ಅದಾದ ಬಳಿಕ ಕಮಲಾ ಪರ ಅವರ ಹಲವು ಪ್ರತಿಸ್ಪರ್ಧಿಗಳು, ಸಂಸದರು, ಹಲವು ರಾಜ್ಯಗಳ ಗವರ್ನರ್‌ಗಳು ಮತ್ತು ಪ್ರಭಾವಿ ಗುಂಪುಗಳು ಬೆಂಬಲ ವ್ಯಕ್ತಪಡಿಸಿವೆ. ಹೀಗೆ ಅವರ ಪರ ವ್ಯಕ್ತವಾಗಿರುವ ಅಭಿಪ್ರಾಯವು, ಅವರು ಅಭ್ಯರ್ಥಿಯಾಗಿ ಹೊರಹೊಮ್ಮಲು ಅಗತ್ಯ ಪ್ರಮಾಣದಷ್ಟಿದೆ ಎಂದು ಅಮೆರಿಕದ ಹಲವು ಮಾಧ್ಯಮಗಳು ವರದಿ ಮಾಡಿವೆ. ಅಭ್ಯರ್ಥಿಯಾಗಿ ಹೊರಹೊಮ್ಮಲು ಪಕ್ಷದ 1976 ಮತಗಳನ್ನು ಪಡೆಯುವ ಅವಶ್ಯಕತೆ ಇದೆ.

ಮುಂದಿನ ನವೆಂಬರ್‌ 5ಕ್ಕೆ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ರಿಪಬ್ಲಿಕನ್‌ ಪಕ್ಷದಿಂದ ಡೊನಾಲ್ಡ್‌ ಟ್ರಂಪ್‌ ಅಭ್ಯರ್ಥಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.