ಸಾರಾಂಶ
ನೆರೆಯ ಪಾಕಿಸ್ತಾನದಲ್ಲಿ ಅನಾಮಿಕರ ಗುಂಡಿನ ಸದ್ದು ಜೋರಾಗಿದ್ದು, ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ಸಹ ಸಂಸ್ಥಾಪಕರಲ್ಲಿ ಒಬ್ಬನಾಗಿದ್ದ ಉಗ್ರ ಆಮೀರ್ ಹಮ್ಜಾನನ್ನು ಅನಾಮಿಕ ವ್ಯಕ್ತಿಗಳು ದಾಳಿ ಮಾಡಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.
- ಪಾಕ್‌ನಲ್ಲಿ ನಿಲ್ಲದ ಅನಾಮಿಕರ ಗುಂಡಿನ ಸದ್ದು । ಹಮ್ಜಾ ಸ್ಥಿತಿ ಗಂಭೀರ
ನವದೆಹಲಿ: ನೆರೆಯ ಪಾಕಿಸ್ತಾನದಲ್ಲಿ ಅನಾಮಿಕರ ಗುಂಡಿನ ಸದ್ದು ಜೋರಾಗಿದ್ದು, ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ಸಹ ಸಂಸ್ಥಾಪಕರಲ್ಲಿ ಒಬ್ಬನಾಗಿದ್ದ ಉಗ್ರ ಆಮೀರ್ ಹಮ್ಜಾನನ್ನು ಅನಾಮಿಕ ವ್ಯಕ್ತಿಗಳು ದಾಳಿ ಮಾಡಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ಈತ ಭಾರತ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿದ್ದ.ಅನಾಮಿಕ ವ್ಯಕ್ತಿಗಳು ಹಮ್ಜಾ ಮನೆಯ ಸಮೀಪದಲ್ಲಿಯೇ ದಾಳಿ ಮಾಡಿದ್ದಾರೆ. ಬಳಿಕ ಕೂಡಲೇ ಹಮ್ಜಾನನ್ನು ಲಾಹೋರ್‌ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿದೆ.
ಈತ ಉಗ್ರ ಹಫೀನ್ ಮತ್ತು ಅಬ್ದುಲ್ ರೆಹ್ಮಾನ್ ಮಕ್ಕಿ ಆಪ್ತನಾಗಿದ್ದು ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಅದರ 17 ಸಹ ಸಂಸ್ಥಾಪಕರಲ್ಲಿ ಈತನೂ ಒಬ್ಬನಾಗಿದ್ದಾನೆ. ಸಂಘಟನೆಯ ಪ್ರಮುಖ ವಿಚಾರವಾದಿಯಾಗಿ ಹಮ್ಜಾ ಕೆಲಸ ಮಾಡುತ್ತಿದ್ದ. ಜೊತೆಗೆ ಲಷ್ಕರ್ ಪತ್ರಿಕೆಯ ಸಂಪಾದಕನಾಗಿಯು ಕೆಲಸ ಮಾಡಿದ್ದ. ಜೊತೆಗೆ ಹಫೀಜ್ ಅಧ್ಯಕ್ಷತೆಯ ಲಷ್ಕರ್ ವಿಶ್ವ ವಿದ್ಯಾಲಯದ ಮಂಡಳಿಯಲ್ಲಿಯೂ ಸದಸ್ಯನಾಗಿದ್ದ. ಈತನನ್ನು ವಿಶ್ವಸಂಸ್ಥೆ ಉಗ್ರ ಎಂದು ಘೋಷಿಸಿದೆ.