ಸಾರಾಂಶ
ಲಕ್ಷಾಂತರ ಭಾರತೀಯರಿಗೆ ಲಾಭವಾಗುವ ಯೋಜನೆಯನ್ನು ಭಾರತ ಸರ್ಕಾರ ಜಾರಿ ಮಾಡುವ ಹಂತದಲ್ಲಿದ್ದು, ಕೊಲ್ಲಿ ದೇಶಗಳಲ್ಲಿರುವ ಭಾರತೀಯ ಕಾರ್ಮಿಕರಿಗೆ 17 ಲಕ್ಷ ರು.ಗಳವರೆಗೆ ಜೀವವಿಮೆ ಒದಗಿಸಲು ಖಾಸಗಿ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುತ್ತಿದೆ.
ದುಬೈ: ಕೊಲ್ಲಿ ದೇಶ ಯುಎಇನಲ್ಲಿ ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮೂಲದ ನೌಕರರಿಗೆ ಜೀವ ವಿಮೆ ಒದಗಿಸುವ ಯೋಜನೆಯೊಂದನ್ನು ಜಾರಿಗೊಳಿಸಲಾಗಿದೆ. ಇದರನ್ವಯ ಸ್ವಾಭಾವಿಕ ಅಥವಾ ಅಪಘಾತದಲ್ಲಿ ಮೃತಪಟ್ಟವರಿಗೆ ಗರಿಷ್ಠ 17 ಲಕ್ಷ ರು.ವರೆಗೂ ವಿಮೆ ಸೌಲಭ್ಯ ಸಿಗಲಿದೆ.
ಯುಎಇಯಲ್ಲಿ ಸುಮಾರು 35 ಲಕ್ಷ ಭಾರತೀಯರು ವಾಸಿಸುತ್ತಿದ್ದಾರೆ. 2022ರಲ್ಲಿ ಯುಎಇನಲ್ಲಿ 1750 ಭಾರತೀಯರು ಸಾವನ್ನಪ್ಪಿದ್ದು, ಈ ಪೈಕಿ ಶೇ.90ಕ್ಕೂ ಹೆಚ್ಚು ಸ್ವಾಭಾವಿಕ ಪ್ರಕರಣಗಳು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅವರಿಗೆ ವಿಮಾ ಸೌಲಭ್ಯ ಒದಗಿಸಲು ನಿರ್ಧರಿಸಲಾಗಿದೆ. ಈ ವಿಮೆ ಪ್ರೀಮಿಯಂ ಅನ್ನು ಉದ್ಯೋಗದಾತರೇ ನೀಡಲಿದ್ದಾರೆ.ಭಾರತೀಯರನ್ನುಉದ್ಯೋಗಕ್ಕೆ ನೇಮಕ ಮಾಡಿಕೊಳ್ಳುವ ಕಂಪನಿಗಳ ಜೊತೆಗೆ ದುಬೈನಲ್ಲಿನ ಭಾರತೀಯ ದೂತಾವಾಸ ಕಚೇರಿ ಮಾತುಕತೆ ನಡೆಸಿ ಈ ಸೌಲಭ್ಯ ಕಲ್ಪಿಸಿದೆ.