ಅಮೆರಿಕ ಕಾಡ್ಗಿಚ್ಚು ತಡೆಗೆ ಆಗಸದಿಂದ ಪಿಂಕ್‌ ಪೌಡರ್‌

| Published : Jan 15 2025, 12:50 AM IST

ಸಾರಾಂಶ

ಲಾಸ್‌ ಏಂಜಲೀಸ್‌: ಬೆಂಕಿಯ ಕೆನ್ನಾಲಿಗೆಗೆ ಬೆಂದಿರುವ ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು ತಹಬದಿಗೆ ತರಲು ಇದೀಗ ಆಗಸದಿಂದ ಹೆಲಿಕಾಪ್ಟರ್‌ ಬಳಸಿ ಪಿಂಕ್‌ ಪೌಡರ್‌ ಸಿಂಪಡಣೆ ಮಾಡಲಾಗುತ್ತಿದೆ.

ಲಾಸ್‌ ಏಂಜಲೀಸ್‌: ಬೆಂಕಿಯ ಕೆನ್ನಾಲಿಗೆಗೆ ಬೆಂದಿರುವ ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು ತಹಬದಿಗೆ ತರಲು ಇದೀಗ ಆಗಸದಿಂದ ಹೆಲಿಕಾಪ್ಟರ್‌ ಬಳಸಿ ಪಿಂಕ್‌ ಪೌಡರ್‌ ಸಿಂಪಡಣೆ ಮಾಡಲಾಗುತ್ತಿದೆ. ಇದರಿಂದ ಕೆಲವೆಡೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆಯಾದರೂ, ವನ್ಯಜೀವಿ, ಜಲಮೂಲ, ಮಾನವನ ಆರೋಗ್ಯದ ಮೇಲೆ ಅಪಾಯವನ್ನುಂಟು ಮಾಡುವ ಆತಂಕ ಕಾರಣವಾಗಿದೆ.

ಬೆಂಕಿ ನಂದಿಸಲು ಬಳಕೆಯಾಗಿರುವ ಈ ಪುಡಿಗಳು ಆಮ್ಲಜನಕ ಕಡಿಮೆ ಮಾಡಿ, ಬೆಂಕಿ ನಂದಿಸುವಲ್ಲಿ ಕೊಂಚ ಮಟ್ಟಿಗೆ ಯಶಸ್ವಿಯಾಗಿದೆ. ಈ ಗುಲಾಬಿ ಬಣ್ಣದ ಪುಡಿ 1960ರ ದಶಕದಿಂದಲೂ ಅಮೆರಿಕದಾದ್ಯಂತ ಬಳಕೆಯಾಗುತ್ತಿದೆ, ಆದರೆ ಬೆಂಕಿ ನಂದಿದ ಬಳಿಕ ಹಲವು ಸ್ಥಳಗಳು ಗುಲಾಬಿ ಬಣ್ಣದ ಪುಡಿಗಳು ಹಾಗೆಯೇ ಉಳಿದು ಬಿಟ್ಟಿವೆ. ಹಲವು ಸ್ಥಳಗಳಲ್ಲಿ ಎಲ್ಲಿ ನೋಡಿದರೂ ಕಟ್ಟಡಗಳ ಮೇಲ್ಛಾವಣಿಗಳು, ವಾಹನಗಳ ಮೇಲೆ ಗುಲಾಬಿ ಬಣ್ಣದ ಪೌಡರ್‌ಗಳು ಇನ್ನೂ ಹಾಗೆಯೇ ಉಳಿದಿದೆ. ಎಲ್ಲೆಡೆ ಕೆಂಪುಕೆಂಪು ವಾತಾವರಣ ನಿರ್ಮಾಣವಾಗಿದೆ.