ಸಾರಾಂಶ
ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾಲ್ಡೀವ್ಸ್‌ನ ಸಚಿವರು ನೀಡಿದ್ದ ಕೀಳು ಹೇಳಿಕೆಯಂಥ ಘಟನೆಗಳು ಇನ್ನು ಮುಂದೆ ಆಗುವುದಿಲ್ಲ ಎಂದು ಮಾಲ್ಡೀವ್ಸ್‌ನ ವಿದೇಶಾಂಗ ಸಚಿವ ಮೂಸಾ ಜಮೀರ್ ಹೇಳಿದ್ದಾರೆ.
ನವದೆಹಲಿ: ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾಲ್ಡೀವ್ಸ್‌ನ ಸಚಿವರು ನೀಡಿದ್ದ ಕೀಳು ಹೇಳಿಕೆಯಂಥ ಘಟನೆಗಳು ಇನ್ನು ಮುಂದೆ ಆಗುವುದಿಲ್ಲ ಎಂದು ಮಾಲ್ಡೀವ್ಸ್‌ನ ವಿದೇಶಾಂಗ ಸಚಿವ ಮೂಸಾ ಜಮೀರ್ ಹೇಳಿದ್ದಾರೆ.
ಅಲ್ಲದೆ ಇಂಥಹವರ ವಿರುದ್ಧ ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಭಾರತಕ್ಕೆ ತಮ್ಮ ಮೊದಲ ಭೇಟಿಯ ವೇಳೆ ಸಂದರ್ಶನದಲ್ಲಿ ಮಾತನಾಡಿದ ಮೂಸಾ,‘ಅಂದಿನ ಸಚಿವರ ಹೇಳಿಕೆಗಳು ಅವರ ವೈಯಕ್ತಿಕ ಹೊರತು ಸರ್ಕಾರ ಅಥವ ಮಾಲ್ಡೀವ್ಸ್ ದೇಶದಲ್ಲ. ನಾವು ಈಗಾಗಲೇ ಅವರ ವಿರುದ್ಧ ಕ್ರಮ ತೆಗೆದುಕೊಂಡಿದ್ದೇವೆ.
ಇನ್ನು ಮುಂದೆ ಇಂಥಹ ಯಾವುದೇ ಎಡವಟ್ಟು ಆಗುವುದಿಲ್ಲ’ ಎಂದು ಹೇಳಿದ್ದಾರೆ. ಜೊತೆಗೆ ಮಾಲ್ಡೀವ್ಸ್‌ನಲ್ಲಿ ಚೀನಾ ಸೇನಾ ನೆಲೆಗೆ ಅವಕಾಶ ನೀಡಲಾಗುವುದು ಎಂಬ ವರದಿಗಳನ್ನು ಅವರು ಸ್ಪಷ್ಟವಾಗಿ ತಳ್ಳಿಹಾಕಿದರು.
)
;Resize=(128,128))
;Resize=(128,128))
;Resize=(128,128))
;Resize=(128,128))