ಸಾರಾಂಶ
ಸಚಿವರ ನೇಮಕಕ್ಕೆ ಸಂಬಂಧಿಸಿದಂತೆ ಮಾಲ್ಡೀವ್ಸ್ ಸಂಸತ್ತಿನಲ್ಲಿ ಸದಸ್ಯರು ಹೊಡೆದಾಡಿಕೊಂಡ ಘಟನೆ ನಡೆದಿದೆ.
ಮಾಲೆ: ನಾಲ್ವರು ಸಚಿವರ ನೇಮಕಕ್ಕೆ ಸಂಸತ್ತಿನ ಅನುಮೋದನೆ ನೀಡಲು ವಿಪಕ್ಷಗಳ ವಿರೋಧ ವ್ಯಕ್ತವಾದ ಕಾರಣ ಮಾಲ್ಡೀವ್ಸ್ ಸಂಸತ್ತಿನಲ್ಲಿ ಆಡಳಿತ ಹಾಗೂ ಪ್ರತಿಪಕ್ಷ ಸಂಸದರು ಹೊಡೆದಾಡಿಕೊಂಡಿದ್ದಾರೆ.
ಇದರಿಂದಾಗಿ ಭಾನುವಾರ ನಡೆದ ವಿಶೇಷ ಸಂಸತ್ ಅಧಿವೇಶನಕ್ಕೆ ಅಡ್ಡಿಯುಂಟಾಗಿದೆ. ಸಚಿವರ ನೇಮಕವನ್ನು ವಿರೋಧಿಸಿ ಸಂಸತ್ತಿನಲ್ಲಿ ಮಾತಿನ ಚಕಮಕಿ ಆರಂಭವಾಗಿದ್ದು, ಬಳಿಕ ಇದು ಹೊಡೆದಾಟದ ರೂಪ ಪಡೆದುಕೊಂಡಿದೆ.
ಸಂಸದರು ಪರಸ್ಪರ ಹೊಡೆದಾಡುವುದಲ್ಲದೇ, ಸದನದ ಮೇಜಿನಿಂದ ಕೆಲವು ಸಂಸದರ ಕಾಲರ್ ಹಿಡಿದು ಎಳೆದು ಥಳಿಸುತ್ತಿರುವ ಹಾಗೂ ಒಬ್ಬರ ಮೇಲೊಬ್ಬರು ಬಿದ್ದು ಕುಸ್ತಿ ಆಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.