ಭಾರತ, ಮಾಲ್ಡೀವ್ಸ್‌ ನಡುವೆ ಶತಮಾನಗಳ ಸ್ನೇಹ: ಮುಯಿಜು

| Published : Jan 27 2024, 01:23 AM IST / Updated: Jan 27 2024, 07:11 AM IST

ಸಾರಾಂಶ

ಭಾರತದ 75 ನೇ ಗಣರಾಜ್ಯೋತ್ಸವಕ್ಕೆ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು಼ ಶುಭ ಕೋರಿದ್ದಾರೆ.

ನವದೆಹಲಿ: ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ತಾರಕಕ್ಕೇರಿರುವ ನಡುವೆಯೇ ಭಾರತದ 75ನೇ ಗಣರಾಜ್ಯೋತ್ಸಕ್ಕೆ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಶುಭ ಕೋರಿದ್ದಾರೆ.

‘ಭಾರತ ಮತ್ತು ಮಾಲ್ಡೀವ್ಸ್‌ ನಡುವೆ ಪರಸ್ಪರ ಗೌರವಿಸುವ ಮತ್ತು ಒಂದು ಆಳವಾದ ಬಾಂಧವ್ಯವನ್ನು ಹೊಂದಿರುವ ಶತಮಾನಗಳ ಹಳೆಯ ಸ್ನೇಹವಿದೆ ಎಂದು ಮುಯಿಜು ತಿಳಿಸಿದ್ದಾರೆ’ ಎಂದು ಮಾಲ್ಡೀವ್ಸ್‌ ಅಧ್ಯಕ್ಷರ ಕಚೇರಿ ಹೇಳಿಕೆಯೊಂದರಲ್ಲಿ ತಿಳಿಸಿದೆ.